alex Certify BIG NEWS: ಜನವರಿಯಿಂದ ಹೆಚ್ಚಾಗಲಿದೆ ಈ ಕಂಪನಿಗಳ ಕಾರಿನ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜನವರಿಯಿಂದ ಹೆಚ್ಚಾಗಲಿದೆ ಈ ಕಂಪನಿಗಳ ಕಾರಿನ ಬೆಲೆ

ಮುಂದಿನ ತಿಂಗಳಿನಿಂದ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಬಹಳಷ್ಟು ಉತ್ಪಾದಕರು ಅದಾಗಲೇ ಘೋಷಿಸಿದ್ದಾರೆ.

ದೇಶದ ಅತಿ ದೊಡ್ಡ ಕಾರು ಉತ್ಪಾದಕ ಮಾರುತಿ ಸುಜ಼ುಕಿ ತನ್ನ ಕಾರುಗಳ ಬೆಲೆಯು ಮುಂದಿನ ತಿಂಗಳಿನಿಂದ ಹೆಚ್ಚಾಗುವುದಾಗಿ ಘೋಷಿಸಿದೆ. ಇದೇ ಹಾದಿ ತುಳಿದಿರುವ ಜರ್ಮನ್‌ ಉತ್ಪಾದಕರಾದ ಮರ್ಸಿಡಿಸ್ ಬೆಂಜ಼್‌ ಹಾಗೂ ಆಡಿ ಸಹ ತಮ್ಮ ಕಾರುಗಳ ರೇಟನ್ನು ಜನವರಿಯಿಂದ ಹೆಚ್ಚಿಸುವುದಾಗಿ ಹೇಳಿವೆ.

ಈ ಆಟೋಮೊಬೈಲ್ ಉತ್ಪಾದಕರು ಮಾತ್ರವಲ್ಲದೇ ದೇಶದಲ್ಲಿರುವ ಅನೇಕ ಕಾರುಗಳು ಹಾಗೂ ದ್ವಿಚಕ್ರ ವಾಹನಗಳ ಕಂಪನಿಗಳೂ ತಮ್ಮ ಉತ್ಪನ್ನಗಳ ಬೆಲೆಗಳಲ್ಲಿ ಮೇಲ್ಮುಖವಾದ ಪರಿಷ್ಕರಣೆ ಮಾಡುವ ಸಾಧ್ಯತೆ ನಿಚ್ಚಳವಾಗಿವೆ.

ಯಾವೆಲ್ಲಾ ಕಂಪನಿಗಳು ತಮ್ಮ ವಾಹನಗಳ ಬೆಲೆ ಹೆಚ್ಚಿಸಲು ಚಿಂತನೆ ನಡೆಸಿವೆ?

* ಮಾರುತಿ ಸುಜ಼ುಕಿ
* ಆಡಿ
* ಮರ್ಸಿಡಿಸ್ ಬೆಂಜ಼್‌
* ಟಾಟಾ ಮೋಟರ್ಸ್
* ಹೋಂಡಾ ಕಾರುಗಳು
* ರೆನೌ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...