alex Certify ಮೊದಲ ದಿನದ ದಾಖಲೆ ಉಡೀಸ್: 2 ನೇ ದಿನವೂ ಭರ್ಜರಿ ಕಲೆಕ್ಷನ್, ಹರಿದ ಮದ್ಯದ ಹೊಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ದಿನದ ದಾಖಲೆ ಉಡೀಸ್: 2 ನೇ ದಿನವೂ ಭರ್ಜರಿ ಕಲೆಕ್ಷನ್, ಹರಿದ ಮದ್ಯದ ಹೊಳೆ

ಮೇ 17 ರವರೆಗೂ ಲಾಕ್ ಡೌನ್ ಜಾರಿಯಲ್ಲಿದ್ದರೂ ಮೇ 4 ರ ಸೋಮವಾರದಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಮೊದಲ ದಿನವೇ ರಾಜ್ಯದಲ್ಲಿ ಮದ್ಯ ಮಾರಾಟ ಜೋರಾಗಿತ್ತು. ಬಹು ದಿನಗಳ ಬಳಿಕ ಮದ್ಯದಂಗಡಿಗೆ ಮುಗಿಬಿದ್ದ ಮದ್ಯಪ್ರಿಯರು ಆಸೆ ಈಡೇರಿಸಿಕೊಂಡಿದ್ದಾರೆ. ಎರಡನೇ ದಿನವೂ ಮದ್ಯ ಮಾರಾಟ ಜೋರಾಗಿದೆ. ಮಂಗಳವಾರ ಸುಮಾರು 197 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ.

36.37 ಲಕ್ಷ ಲೀಟರ್ ಭಾರತೀಯ ಮದ್ಯ, 7.02 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಕರ್ನಾಟಕ ಪಾನೀಯ ನಿಗಮದಿಂದ ಸುಮಾರು 183 ಕೋಟಿ ರೂ. ಮೌಲ್ಯದ 3.95 ಲಕ್ಷ ಕೇಸ್ ಭಾರತೀಯ ಮದ್ಯ, 79 ಸಾವಿರ ಕೇಸ್ ಬಿಯರ್ ಸರಬರಾಜು ಮಾಡಲಾಗಿದೆ.

ನಾಳೆಯಿಂದ ಎಲ್ಲ ಮದ್ಯದಂಗಡಿಗಳಲ್ಲಿ ಸಂಪೂರ್ಣ ದಾಸ್ತಾನು ಇರುವಂತೆ ಮದ್ಯ ಮಾರಾಟ ಮಳಿಗೆಗಳಿಗೆ ಮದ್ಯವನ್ನು ಸರಬರಾಜು ಮಾಡಲಾಗಿದೆ. ಮೊದಲ ದಿನ 45 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿತ್ತು. ಎರಡನೇ ದಿನ ಸುಮಾರು 197 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...