alex Certify LPG ಸಬ್ಸಿಡಿ ಬಂದ್ ಆಗಿದ್ಯಾ….? ಮನೆಯಲ್ಲೇ ಕುಳಿತು ಸುಲಭವಾಗಿ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

LPG ಸಬ್ಸಿಡಿ ಬಂದ್ ಆಗಿದ್ಯಾ….? ಮನೆಯಲ್ಲೇ ಕುಳಿತು ಸುಲಭವಾಗಿ ಮಾಡಿ ಈ ಕೆಲಸ

ಎಲ್.ಪಿ.ಜಿ. ಸಿಲಿಂಡರ್ ಬೆಲೆ ಕಳೆದ 7 ವರ್ಷಗಳಲ್ಲಿ ದ್ವಿಗುಣವಾಗಿದೆ. ಆದ್ರೆ ಎಲ್.ಪಿ.ಜಿ. ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಎಲ್.ಪಿ.ಜಿ. ಸಿಲಿಂಡರ್ ಬಳಕೆದಾರರು ನೀವಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ.

ಎಲ್.ಪಿ.ಜಿ. ಖರೀದಿಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ನೇರವಾಗಿ ಅದು ನಿಮ್ಮ ಖಾತೆಗೆ ಹೋಗುತ್ತದೆ. ನಿಮ್ಮ ಖಾತೆಗೆ ಸಬ್ಸಿಡಿ ಬಂದಿದೆಯಾ ಎಂಬುದನ್ನು ನೀವು ಚೆಕ್ ಮಾಡಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ಸಬ್ಸಿಡಿ ದರ ಬೇರೆಯಿದ್ದು, ಇದಕ್ಕೆ ಆಧಾರ್ ಲಿಂಕ್ ಮಾಡಬೇಕಾಗುತ್ತದೆ.

ವಾರ್ಷಿಕ 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಸಬ್ಸಿಡಿ ಸಿಗುವುದಿಲ್ಲ. ವಾರ್ಷಿಕ 10 ಲಕ್ಷ ರೂಪಾಯಿಗಳ ಆದಾಯವನ್ನು ಪತಿ ಮತ್ತು ಪತ್ನಿ ಇಬ್ಬರ ಗಳಿಕೆಯನ್ನು ಸೇರಿಸಿ ಹೇಳಲಾಗುತ್ತದೆ.

ಆಧಾರ್ ನ್ನು ಎಲ್.ಪಿ.ಜಿ. ಜೊತೆ ಲಿಂಕ್ ಮಾಡುವುದು ಸುಲಭ. ಮನೆಯಲ್ಲೇ ಕುಳಿತು ಈ ಕೆಲಸ ಮಾಡಬಹುದು. ಕರೆ ಮಾಡುವ ಮೂಲಕ, ಐವಿಆರ್ಎಸ್ ಮೂಲಕ ಮತ್ತು ಎಸ್‌ಎಂಎಸ್ ಮೂಲಕವೂ ಲಿಂಕ್ ಮಾಡಬಹುದು. ಹಾಗೆ ಸಬ್ಸಿಡಿ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಕೂಡ ಸುಲಭ.‌

ಮೊದಲು ಇಂಡೇನ್‌ನ ಅಧಿಕೃತ ವೆಬ್‌ಸೈಟ್‌ http://mylpg.in/hindi/index.aspxಗೆ ಭೇಟಿ ನೀಡಬೇಕು. ಮುಖಪುಟದಲ್ಲಿ ಕಾಣಿಸಿಕೊಳ್ಳುವ ಎಲ್.ಪಿ.ಜಿ. ಸಿಲಿಂಡರ್ ಚಿತ್ರದ ಮೇಲೆ ಕ್ಲಿಕ್ ಮಾಡಬೇಕು. ಕಂಪ್ಲೇಂಟ್ ಬಾಕ್ಸ್ ನಲ್ಲಿ  ಸಬ್ಸಿಡಿ ಸ್ಥಿತಿ ಬರೆಯಿರಿ ಮತ್ತು ಮುಂದುವರಿಯಿರಿ ಮೇಲೆ ಕ್ಲಿಕ್ ಮಾಡಿ. ಇದರ ನಂತರ ಸಬ್ಸಿಡಿ ಸಂಬಂಧಿತ  ಗುಂಡಿಯನ್ನು ಕ್ಲಿಕ್ ಮಾಡಿ.

ಇನ್ನೊಂದು ಪುಟ ತೆರೆದುಕೊಳ್ತಿದ್ದಂತೆ ಗ್ರಾಹಕರು ಸ್ವೀಕರಿಸದ ಸಬ್ಸಿಡಿ ಕ್ಲಿಕ್ ಮಾಡಬೇಕಾಗುತ್ತದೆ. ಕ್ಲಿಕ್ ಮಾಡಿದ ನಂತರ ಇನ್ನೊಂದು ಪುಟ ತೆಗೆಯುತ್ತದೆ. ಸಬ್ಸಿಡಿ ಸ್ಥಿತಿಯನ್ನು ಪರೀಕ್ಷಿಸಲು 2 ಆಯ್ಕೆಗಳನ್ನು ತೋರಿಸಲಾಗುತ್ತದೆ. ಮೊದಲನೇಯದು ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಎರಡನೇಯದು ಎಲ್.ಪಿ.ಜಿ. ಐಡಿ. ಐಡಿ ಹಾಕಿದ ನಂತ್ರ ಪರಿಶೀಲಿಸಿ ಕ್ಲಿಕ್ ಮಾಡಬೇಕು. ಸಬ್ಸಿಡಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಸಿಗುತ್ತದೆ.

ಆಧಾರ್ ಕಾರ್ಡ್ ಮೂಲಕ ಎಲ್.ಪಿ.ಜಿ. ಸಬ್ಸಿಡಿ ಪಡೆಯಲು, ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕಾಗುತ್ತದೆ. ಅದರ ನಂತರ ಗ್ರಾಹಕರು ತಮ್ಮ ಎಲ್.ಪಿ.ಜಿ. ಸಂಪರ್ಕವನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬೇಕಾಗುತ್ತದೆ. ಹಾಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಗ್ಯಾಸ್ ಏಜೆನ್ಸಿಯ ನಿಮ್ಮ ಖಾತೆ ಜೊತೆ ಲಿಂಕ್ ಮಾಡಬೇಕು.

ನಂತ್ರ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿದ ನಂತರ ಯುಐಡಿ <ಆಧಾರ್ ಸಂಖ್ಯೆ> ಎಂದು ಟೈಪ್ ಮಾಡಿ ಮತ್ತು ಅದನ್ನು ಮತ್ತೆ ಗ್ಯಾಸ್ ಏಜೆನ್ಸಿ ಸಂಖ್ಯೆಗೆ ಕಳುಹಿಸಿ. ಆಗ ಎಲ್.ಪಿ.ಜಿ. ನಿಮ್ಮ ಆಧಾರ್‌ಗೆ ಲಿಂಕ್ ಮಾಡಲಾಗುತ್ತದೆ. ಅದರ ದೃಢೀಕರಣವು ನಿಮ್ಮ ಮೊಬೈಲ್ ಗೆ ಬರುತ್ತದೆ.

ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಇಂಡೇನ್ ಗ್ಯಾಸ್ ಏಜೆನ್ಸಿಯ ಸಂಖ್ಯೆ 1800 2333 5555 ಗೆ ಕರೆ ಮಾಡುವುದು ಇನ್ನೊಂದು ಮಾರ್ಗವಾಗಿದೆ. ಆಧಾರ್ ಸಂಖ್ಯೆಯನ್ನು ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿಗೆ ತಿಳಿಸಿ ಲಿಂಕ್ ಮಾಡುವಂತೆ ಹೇಳಬೇಕು

ಯುಐಡಿಎಐನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ, ವಿಳಾಸ ಮತ್ತು ಇತರ ಪ್ರಮುಖ ಮಾಹಿತಿಯನ್ನು ಭರ್ತಿ ಮಾಡಿ ಲಿಂಕ್ ಮಾಡಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...