alex Certify ಜಿಯೋ ಫ್ಲಾಟ್ಫಾರ್ಮ್ ನಲ್ಲಿ ಕೆಕೆಆರ್ ಮಾಡಲಿದೆ 11,367 ಕೋಟಿ ರೂ. ಹೂಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಫ್ಲಾಟ್ಫಾರ್ಮ್ ನಲ್ಲಿ ಕೆಕೆಆರ್ ಮಾಡಲಿದೆ 11,367 ಕೋಟಿ ರೂ. ಹೂಡಿಕೆ

kkr-to-invest-rs-11367-crore-in-jio-platforms-mb– News18 Gujarati

ರಿಲಾಯನ್ಸ್ ಇಂಡಸ್ಟ್ರಿಯ ರಿಲಾಯನ್ಸ್ ಜಿಯೋ ಪ್ಲಾಟ್ಫಾರ್ಮ್ ಲಿಮಿಟೆಡ್ ನಲ್ಲಿ ಕೆಕೆಆರ್ ಹೂಡಿಕೆ ಮಾಡಲು ಮುಂದಾಗಿದೆ. ಕೆಕೆಆರ್ 11,367 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ದೇಶದ ದೊಡ್ಡ ಡಿಜಿಟಲ್ ಸೇವೆಗಳ ವೇದಿಕೆ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಜಿಯೋ ಪ್ಲಾಟ್‌ಫಾರ್ಮ್‌ಗಳು ಈ ಒಪ್ಪಂದವನ್ನು ಶುಕ್ರವಾರ ಪ್ರಕಟಿಸಿವೆ.

ಜಿಯೋ ಪ್ಲಾಟ್ಫಾರ್ಮ್‌ಗಳಲ್ಲಿ ಶೇಕಡಾ 2.32 ರಷ್ಟು ಪಾಲನ್ನು ಕೆಕೆಆರ್ 11,367 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಇದು ಏಷ್ಯಾದಲ್ಲಿ ಕೆಕೆಆರ್ ಅವರ ಅತಿದೊಡ್ಡ ಹೂಡಿಕೆಯಾಗಿದೆ. ಜಿಯೋ ಪ್ಲಾಟ್ಫಾರ್ಮ್‌ಗಳ ಈಕ್ವಿಟಿ ಮೌಲ್ಯವು 4.91 ಲಕ್ಷ ಕೋಟಿ ರೂಪಾಯಿ. ಉದ್ಯಮ ಮೌಲ್ಯ 5.16 ಲಕ್ಷ ಕೋಟಿ ರೂಪಾಯಿ. ಈಗ ಈ ಒಪ್ಪಂದದೊಂದಿಗೆ ಜಿಯೋ ಕಳೆದ ಒಂದು ತಿಂಗಳಲ್ಲಿ ಸುಮಾರು 78,562 ಕೋಟಿ ರೂಪಾಯಿ ಹೂಡಿಕೆಗಾಗಿ ಮಾಡಿದಂತಾಗಿದೆ.

ಜಿಯೋ ಪ್ಲಾಟ್ಫಾರ್ಮ್‌ಗಳು ಕಳೆದ ಒಂದು ತಿಂಗಳಲ್ಲಿ 5 ದೊಡ್ಡ ವ್ಯವಹಾರಗಳನ್ನು ನಡೆಸಿವೆ. ರಿಲಯನ್ಸ್ ಜಿಯೋದಲ್ಲಿ ಹೂಡಿಕೆ ಮಾಡುವ ಕಂಪನಿಗಳ ಪಟ್ಟಿಯಲ್ಲಿ ಕೆಕೆಆರ್ ಈಗ ಹೊಸ ಸೇರ್ಪಡೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...