alex Certify ಹುಬ್ಬೇರಿಸುವಂತಿದೆ ಕವಾಸಕಿ ಹೊಸ ಬೈಕಿನ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಬ್ಬೇರಿಸುವಂತಿದೆ ಕವಾಸಕಿ ಹೊಸ ಬೈಕಿನ ಬೆಲೆ

ಪಸಿದ್ಧ ದ್ವಿಚಕ್ರ ವಾಹನ ಕಂಪನಿಯಾದ ಕವಾಸಕಿ ಎರಡು ಹೊಚ್ಚ ಹೊಸ ಸೂಪರ್​ ಚಾರ್ಜಡ್​ ಬೈಕ್​ ಮಾಡೆಲ್​ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕವಾಸಕಿ ಜೆಡ್​ ಹೆಚ್​ 2, ಕವಾಸಕಿ ಜೆಡ್​ ಹೆಚ್​ 2 ಎಸ್​ಇ ಎಂಬ ಎರಡು ಬೈಕ್​​ಗಳು ಇದಾಗಿವೆ. ಇವುಗಳ ಬೆಲೆ ತಲಾ 21.9 ಲಕ್ಷ ರೂಪಾಯಿ ಹಾಗೂ 25.9 ಲಕ್ಷ ರೂಪಾಯಿ ಎಂದು ಕಂಪನಿ ಹೇಳಿದೆ.

ಕವಾಸಕಿ ಜೆಡ್​ ಹೆಚ್​ 2 ಬೈಕ್​ ನಾಲ್ಕು ರೈಡ್​ ಮೋಡ್​ಗಳನ್ನ ಹೊಂದಿದೆ. ರಸ್ತೆ, ಮಳೆ, ಸ್ಪೋರ್ಟ್ಸ್ ಹಾಗೂ ರೈಡರ್​ಗಳೆಂಬ ನಾಲ್ಕು ಮೋಡ್​ಗಳಿವೆ. ಇದು ಮಾತ್ರವಲ್ಲದೇ ಮೂರು ಪವರ್​ ಮೋಡ್​ಗಳಿವೆ. ಇನ್ನೂ ಹೆಚ್ಚುವರಿಯಾಗಿ ಕವಾಸಕಿ ಲಾಂಚ್​ ಕಂಟ್ರೋಲ್​, ಟ್ರ್ಯಾಕ್ಷನ್​ ಕಂಟ್ರೋಲ್​ ಹಾಗೂ ಕ್ರೂಸ್​ ಕಂಟ್ರೋಲರ್​ನಂತಹ ಎಲೆಕ್ಟ್ರಾನಿಕ್​ ರೈಡರ್​ ಸಾಧನಗಳಿವೆ.

ಕವಾಸಕಿ ಜೆಡ್​ ಹೆಚ್​2 ಎಸ್​ಇ 43 ಎಂಎಂ ಇನ್ವರ್ಟೆಡ್​ ಫೋರ್ಕ್​ನ್ನು ನಿರ್ವಹಿಸುತ್ತದೆ. ಇದನ್ನ ಕವಾಸಕಿಯ ಸೆಮಿ ಎಲೆಕ್ಟ್ರಾನಿಕ್​​ ವ್ಯವಸ್ಥೆ ಮೂಲಕ ವಿದ್ಯುನ್ಮಾನವಾಗಿ ನಿಯಂತ್ರಿಸಲಾಗುತ್ತೆ. ಸ್ಕೈ ಹೂಕ್​ ವ್ಯವಸ್ಥೆ ವಿದ್ಯುನ್ಮಾನ ನಿಯಂತ್ರಿತ ಸಂಕೋಚನ ಹಾಗೂ ರಿಬೌಂಡ್​ ಹೊಂದಾಣಿಕೆಯನ್ನ ನಿಯಂತ್ರಿಸುತ್ತೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...