alex Certify BIG BREAKING: ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಅವಧಿ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಅವಧಿ ವಿಸ್ತರಣೆ

ದೇಶದಲ್ಲಿ ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ಸಾರ್ವಜನಿಕರು ಆರ್ಥಿಕವಾಗಿ ಕಂಗೆಟ್ಟು ಹೋಗಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್‌ ಡೌನ್‌ ಜಾರಿಗೊಳಿಸಿದ್ದ ಪರಿಣಾಮ ವಹಿವಾಟಿಲ್ಲದೆ ಜನತೆ ಪರಿತಪಿಸಿದ್ದರು.

ಈಗ ಲಾಕ್‌ ಡೌನ್‌ ಸಡಿಲಿಕೆ ಮಾಡಿ ವ್ಯಾಪಾರ – ವಹಿವಾಟಿಗೆ ಅನುವು ಮಾಡಿಕೊಟ್ಟಿದ್ದರೂ ಆರ್ಥಿಕ ಚಟುವಟಿಕೆ ಮಂದಗತಿಯಲ್ಲಿ ಸಾಗಿದೆ. ಇದರ ಮಧ್ಯೆ ಮುಗಿಲು ಮುಟ್ಟಿರುವ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಿಂದಾಗಿ ದೈನಂದಿನ ವಸ್ತುಗಳ ಬೆಲೆಯೂ ಏರಿಕೆಯಾಗಿದೆ.

ಇದೀಗ ಆದಾಯ ತೆರಿಗೆ ಇಲಾಖೆ ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ತೆರಿಗೆದಾರರಿಗೆ ಕೊಂಚ ನೆಮ್ಮದಿಯ ಸುದ್ದಿ ನೀಡಿದೆ. 2019-20 ನೇ ಸಾಲಿನ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವ ಅವಧಿಯನ್ನು ನವೆಂಬರ್‌ 30, 2020 ರ ವರೆಗೆ ವಿಸ್ತರಿಸಲಾಗಿದೆ.

— Income Tax India (@IncomeTaxIndia) July 4, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...