alex Certify ಆದಾಯ ತೆರಿಗೆದಾರರಿಗೆ ಗುಡ್ ನ್ಯೂಸ್: ಹೊಸ ITR ಮೊಬೈಲ್ ಅಪ್ಲಿಕೇಶನ್ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆದಾಯ ತೆರಿಗೆದಾರರಿಗೆ ಗುಡ್ ನ್ಯೂಸ್: ಹೊಸ ITR ಮೊಬೈಲ್ ಅಪ್ಲಿಕೇಶನ್ ಬಿಡುಗಡೆ

ಆದಾಯ ತೆರಿಗೆ ಇಲಾಖೆಯು ತೆರಿಗೆದಾರರ ಅನುಕೂಲಕ್ಕಾಗಿ ಬುಧವಾರ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಇದು ವಾರ್ಷಿಕ ಮಾಹಿತಿ ಹೇಳಿಕೆ(ಎಐಎಸ್) ಮತ್ತು ತೆರಿಗೆದಾರರ ಮಾಹಿತಿ ಸಾರಾಂಶದಲ್ಲಿ(ಟಿಐಎಸ್) ಲಭ್ಯವಿರುವ ಮಾಹಿತಿಯನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ.

‘ಎಐಎಸ್ ಫಾರ್ ಟ್ಯಾಕ್ಸ್ ಪೇಯರ್’ ಎಂದು ಕರೆಯಲ್ಪಡುವ ಈ ಹೊಸ ಮೊಬೈಲ್ ಆಪ್ ಅನ್ನು ಆದಾಯ ತೆರಿಗೆ ಇಲಾಖೆಯು ಉಚಿತವಾಗಿ ನೀಡಲಿದ್ದು, ಗೂಗಲ್ ಪ್ಲೇ ಮತ್ತು ಆಪ್ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಈ ಹೊಸ ITR ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಲು, ತೆರಿಗೆದಾರರು ತಮ್ಮ PAN ಸಂಖ್ಯೆಯನ್ನು ಒದಗಿಸುವ ಮೂಲಕ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆ ಮತ್ತು ಇಮೇಲ್‌ನಲ್ಲಿ ಕಳುಹಿಸಲಾದ OTP ಯೊಂದಿಗೆ ದೃಢೀಕರಿಸಬೇಕು. ದೃಢೀಕರಣದ ನಂತರ, ತೆರಿಗೆದಾರರು ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರವೇಶಿಸಲು 4-ಅಂಕಿಯ ಪಿನ್ ಅನ್ನು ಹೊಂದಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...