alex Certify ಬೆರಗಾಗಿಸುತ್ತೆ ಈ ಪುಟ್ಟ ಉಂಗುರದಲ್ಲಿರುವ ವಜ್ರಗಳ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಈ ಪುಟ್ಟ ಉಂಗುರದಲ್ಲಿರುವ ವಜ್ರಗಳ ಸಂಖ್ಯೆ

ಪುಟ್ಟ ಉಂಗುರದಲ್ಲಿ ಅತಿ ಹೆಚ್ಚು ವಜ್ರಗಳನ್ನ ಜೋಡಿಸುವ ಮೂಲಕ ಹೈದರಾಬಾದ್​ ಮೂಲದ ಜ್ಯುವೆಲ್ಲರಿ ಅಂಗಡಿಯೊಂದು ಗಿನ್ನೆಸ್​ ರೆಕಾರ್ಡ್​ ಪಟ್ಟಿಯಲ್ಲಿ ಸೇರಿದೆ.

ಕೊಟ್ಟಿ ಶ್ರೀಕಾಂತ್​ ಮಾಲೀಕತ್ವದ ಚಂದುಬಾಯ್​ ಜ್ಯುವೆಲ್ಲರಿ ಶಾಪ್​ನಲ್ಲಿ ಬರೋಬ್ಬರಿ 7,801 ವಜ್ರಗಳನ್ನ ಬಳಸಿ ಹೂವಿನ ಆಕಾರದ ಉಂಗುರವನ್ನ ತಯಾರಿಸಲಾಗಿದೆ. ಬ್ರಹ್ಮ ಕಮಲದ ಆಕೃತಿಯಲ್ಲಿ ನಿರ್ಮಾಣವಾಗಿರುವ ಈ ಉಂಗುರಕ್ಕೆ ದಿ ಡಿವೈನ್​ – 7801 ಬ್ರಹ್ಮ ವಜ್ರ ಕಮಲಂ ಅಂತಾ ಹೆಸರಿಡಲಾಗಿದೆ.

ಈ ವಿಚಾರವಾಗಿ ಮಾತನಾಡಿದ ಜ್ಯುವೆಲ್ಲರಿ ಶಾಪ್​ ಮಾಲೀಕ ಕೊಟ್ಟಿ ಶ್ರೀಕಾಂತ್​, ನಮ್ಮ ಸಂಪ್ರದಾಯದಲ್ಲಿ ದೇವರನ್ನ ಬ್ರಹ್ಮ ಕಮಲದ ಮೇಲೆ ಕೂರಿಸಿದಂತೆ ಚಿತ್ರಿಸಲಾಗುತ್ತೆ. ಅಲ್ಲದೇ ದೇವರ ಆರಾಧನೆಗೂ ಹೂವುಗಳು ಬೇಕೆ ಬೇಕು. ಹೂವುಗಳು ಅಂದರೆ ಶುದ್ಧತೆಯ ಸಂಕೇತ. ಹೀಗಾಗಿ ಹೂವಿನ ಆಕಾರದಲ್ಲೇ ಉಂಗುರ ಮಾಡಿ ಗಿನ್ನೆಸ್​ ಸಾಲಿಗೆ ಸೇರಿದ್ದೇವೆ ಅಂತಾ ಹೇಳಿದ್ರು.

https://www.facebook.com/GuinnessWorldRecords/videos/683348099266809

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...