alex Certify ATM ನಲ್ಲಿ ನಕಲಿ ನೋಟು ಬಂದ ವೇಳೆ ಮಾಡಬೇಕಾದ್ದೇನು….? ಇಲ್ಲಿದೆ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ATM ನಲ್ಲಿ ನಕಲಿ ನೋಟು ಬಂದ ವೇಳೆ ಮಾಡಬೇಕಾದ್ದೇನು….? ಇಲ್ಲಿದೆ ಸಂಪೂರ್ಣ ವಿವರ

ದೇಶದಲ್ಲಿ ನಕಲಿ ನೋಟುಗಳ ಚಲಾವಣೆ ಮತ್ತೆ ಆರಂಭವಾದಂತೆ ಕಾಣುತ್ತಿದೆ. ನಕಲಿ ನೋಟುಗಳ ಕುರಿತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸ್ವತಃ ಸಾರ್ವಜನಿಕರನ್ನು ಎಎಚ್ಚರಿಸುವ ಕೆಲಸ ಮಾಡುತ್ತಿದೆ.

ಬ್ಯಾಂಕ್ ಎಟಿಎಂ ಗಳಲ್ಲಿ ಕೂಡಾ ಕೆಲವೊಮ್ಮೆ ನಕಲಿ ನೋಟುಗಳು ಗ್ರಾಹಕರ ಕೈ ಸೇರುತ್ತಿವೆ. ಇಂತಹ ಸಂದರ್ಭಗಳಲ್ಲಿ ಅದನ್ನು ಮತ್ತೊಬ್ಬರಿಗೆ ವರ್ಗಾಯಿಸಿ ಕೈ ತೊಳೆದುಕೊಳ್ಳಲು ಮುಂದಾಗುವವರೇ ಹೆಚ್ಚು.

ಆದರೆ ಇದು ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಯೂ ಇರುತ್ತದೆ. ಹಾಗಾದರೆ ಎಟಿಎಂ ಗಳಲ್ಲಿ ನಕಲಿ ನೋಟು ಬಂದರೆ ಏನು ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ನಕಲಿ ನೋಟು ಪತ್ತೆ ಹಚ್ಚುವುದು ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ಗ್ರಾಹಕರು ಎಟಿಎಂ ನಿಂದ ಹಣ ಪಡೆದ ವೇಳೆ ನೋಟುಗಳನ್ನು ಕೂಲಂಕುಶವಾಗಿ ಪರಿಶೀಲಿಸಬೇಕು. ಒಂದು ವೇಳೆ ನಕಲಿ ನೋಟು ಬಂದಿರುವುದು ಕಂಡು ಬಂದಲ್ಲಿ ಕೂಡಲೇ ಎಟಿಎಂ ಗಾರ್ಡ್ ಗಮನಕ್ಕೆ ಇದನ್ನು ತರಬೇಕಲ್ಲದೇ ಅವರ ಬಳಿ ಇರುವ ರಿಜಿಸ್ಟರ್ ನಲ್ಲಿ ನಕಲಿ ನೋಟಿನ ಸೀರಿಯಲ್ ನಂಬರ್ ಸಮೇತ ನಮೂದಿಸಬೇಕು.

ಜೊತೆಗೆ ಎಟಿಎಂ ರಶೀದಿಯಲ್ಲಿನ ವಹಿವಾಟು ಸಂಖ್ಯೆಯನ್ನೂ ಬರೆಯಬೇಕು. ಅಲ್ಲದೇ ಬರೆದ ವಿವರವನ್ನು ಮೊಬೈಲ್ ನಲ್ಲಿ ಫೋಟೋ ತೆಗೆದುಕೊಳ್ಳಬೇಕು. ಬಳಿಕ ಸಂಬಂಧಪಟ್ಟ ಬ್ಯಾಂಕ್ ಗಮನಕ್ಕೆ ತಂದು ಆ ನೋಟನ್ನು ನೀಡಿ ಅದಕ್ಕೆ ಪ್ರತಿಯಾಗಿ ಅಸಲಿ ನೋಟನ್ನು ಪಡೆಯಬಹುದು.

ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್

ಒಂದು ವೇಳೆ ಬ್ಯಾಂಕ್ ನವರು ಈ ಕುರಿತು ನಿರ್ಲಕ್ಷ್ಯ ವಹಿಸಿದರೆ ನೇರವಾಗಿ ಈ ಕುರಿತು ರಿಸರ್ವ್ ಬ್ಯಾಂಕ್ ಗೆ ಇ ಮೇಲ್ ಮೂಲಕ ಗಮನಕ್ಕೆ ತರಬಹುದು. ಜೊತೆಗೆ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...