alex Certify ಗ್ರಾಹಕರಿಗೆ ಶಾಕ್ ನೀಡಿದ HDFC ಬ್ಯಾಂಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಶಾಕ್ ನೀಡಿದ HDFC ಬ್ಯಾಂಕ್

ಎಚ್.ಡಿ.ಎಫ್.ಸಿ. ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದೆ. ಸ್ಥಿರ ಠೇವಣಿ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿದೆ. ಬ್ಯಾಂಕ್ ಒಂದು ಮತ್ತು ಎರಡು ವರ್ಷಗಳವರೆಗಿನ ಎಫ್.ಡಿ.ಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ. ಬೇರೆ ಯಾವುದೇ ಅವಧಿಯ ಸ್ಥಿರ ಠೇವಣಿ  ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಬ್ಯಾಂಕ್ ಒಂದು ವರ್ಷ ಅವಧಿಯ ಎಫ್.ಡಿ.ಯ ಬಡ್ಡಿ ದರವನ್ನು 20 ಬೇಸಿಕ್ ಪಾಯಿಂಟ್ ಇಳಿಕೆ ಮಾಡಿದೆ. 7 ದಿನಗಳಿಂದ 29 ದಿನಗಳವರೆಗಿನ ಎಫ್.ಡಿ. ಬಡ್ಡಿ ದರವು ಶೇಕಡಾ 2.50ರಷ್ಟಾಗಿದೆ. 30 ದಿನಗಳಿಂದ 90 ದಿನಗಳವರೆಗಿನ ಎಫ್‌ಡಿ ಮೇಲಿನ ಬಡ್ಡಿದರಗಳು ಶೇಕಡಾ 3ರಷ್ಟಿದೆ. 91 ದಿನಗಳಿಂದ 6 ತಿಂಗಳವರೆಗಿನ ಎಫ್‌ಡಿ ಮೇಲಿನ ಬಡ್ಡಿದರಗಳು ಶೇಕಡಾ 3.5ರಷ್ಟಿದೆ.

6 ತಿಂಗಳಿನಿಂದ 364 ದಿನಗಳ ಎಫ್‌ಡಿ ಮೇಲಿನ ಬಡ್ಡಿದರಗಳು ಶೇಕಡಾ 4.4ರಷ್ಟಿದೆ. ಒಂದು ವರ್ಷ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರ ಶೇಕಡಾ 4.9ರಷ್ಟಿದೆ. ಎರಡು ವರ್ಷಗಳ ಎಫ್‌ಡಿ ಬಡ್ಡಿದರವು ಶೇಕಡಾ 5ರಷ್ಟಿದೆ. ಎರಡು ವರ್ಷದಿಂದ 3 ವರ್ಷಗಳವರೆಗಿನ ಎಫ್‌ಡಿಗಳ ಬಡ್ಡಿದರ ಶೇಕಡಾ 5.15ರಷ್ಟಿದೆ. 3 ವರ್ಷದಿಂದ 5 ವರ್ಷಗಳವರೆಗೆ ಎಫ್‌ಡಿಗಳ ಬಡ್ಡಿದರ ಶೇಕಡಾ 5.30ರಷ್ಟಿದೆ. 5 ವರ್ಷದಿಂದ 10 ವರ್ಷಗಳವರೆಗೆ ಎಫ್‌ಡಿಗಳ ಬಡ್ಡಿದರ ಶೇಕಡಾ 5.50ರಷ್ಟಿದೆ.

ಹಿರಿಯ ನಾಗರಿಕರ ಸ್ಥಿರ ಠೇವಣಿ ಬಡ್ಡಿ ದರವು ಸಾಮಾನ್ಯರಿಗಿಂತ 50 ಬೇಸಿಕ್ ಪಾಯಿಂಟ್ ಹೆಚ್ಚಿದೆ. ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳ ಅವಧಿಯ ಎಫ್‌ಡಿ ಮೇಲೆ ಶೇಕಡಾ 3 ರಿಂದ ಶೇಕಡಾ 6.25ರಷ್ಟು ಬಡ್ಡಿ ಸಿಗುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...