alex Certify ದಂಗಾಗಿಸುತ್ತೆ ದೇಶದ ಅತಿ ಶ್ರೀಮಂತ ಮಹಿಳೆ ಹೊಂದಿರುವ ಆಸ್ತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ದೇಶದ ಅತಿ ಶ್ರೀಮಂತ ಮಹಿಳೆ ಹೊಂದಿರುವ ಆಸ್ತಿ…!

ಐಟಿ ಕಂಪನಿಗಳಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಹೆಚ್​ಸಿಎಲ್​ ಕಂಪನಿಯ ಚೇರ್​ ಪರ್ಸನ್​ ರೋಶನಿ ನಾಡರ್​ ಬರೋಬ್ಬರಿ 54850 ಕೋಟಿ ರೂಪಾಯಿಗಳ ಆದಾಯ ಹೊಂದುವ ಮೂಲಕ ದೇಶದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಬಯೋಕಾನ್​​ನ ಕಿರಣ್​ ಮಜುಂದಾರ್​ ಶಾ 36500 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಒಡೆತನ ಹೊಂದುವ ಮೂಲಕ ದ್ವಿತೀಯ ಸ್ಥಾನದಲ್ಲಿದ್ದಾರೆ. ಹುರುನ್​ ಇಂಡಿಯಾ ಹಾಗೂ ಕೋಟಕ್​ ವೆಲ್ತ್​ ಸಿದ್ಧಪಡಿಸಿದ ವ್ಯಕ್ತಿಗಳ ಸಾಲಿನಲ್ಲಿ 31 ಮಹಿಳೆಯರು ಸ್ಥಾನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದೆ.

ಸ್ವಯಂ ನಿರ್ಮಿತ ವಿಭಾಗದಲ್ಲಿ ಕಿರಣ್​ ಮಜುಂದಾರ್​ ಶಾ ಮುಂಚೂಣಿಯಲ್ಲಿದ್ದಾರೆ, ಜೊಹೋದ ರಾಧಾ ವೆಂಬು 11,590 ಕೋಟಿ ರೂಪಾಯಿ ಹಾಗೂ ಅರಿಸ್ಟಾ ನೆಟ್​ವರ್ಕ್ಸ್​​ನ ಜಯಶ್ರೀ ಉಲ್ಲಾರ್​​ 10,220 ಕೋಟಿ ರೂಪಾಯಿ ಆಸ್ತಿ ಒಡೆತನ ಹೊಂದಿದ್ದಾರೆ. ಕುತೂಹಲಕಾರಿ ಅಂಶ ಅಂದರೆ ಹುರುನ್​ ಸಿದ್ಧಪಡಿಸಿದ ವಿಶ್ವದ ಶ್ರೀಮಂತರ ಪಟ್ಟಿಯಲ್ಲೂ ಶಾ, ಉಲ್ಲಾಲ್​, ಹಾಗೂ ವೆಂಬು ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ನಗರಿ ಮುಂಬೈ ಈ ಪಟ್ಟಿಗೆ 32 ಮಂದಿ ಯಶಸ್ವಿ ಮಹಿಳೆಯರ ಕೊಡುಗೆ ನೀಡಿದ್ರೆ, ದೆಹಲಿಯಿಂದ 20 ಹಾಗೂ ಹೈದರಾಬಾದ್​ನಿಂದ 10 ಮಂದಿ ಆಯ್ಕೆಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...