alex Certify ಬೆಳ್ಳಿ, ಚಿನ್ನಾಭರಣ ಖರೀದಿದಾರರಿಗೆ ಬಿಗ್ ಶಾಕ್: 57 ಸಾವಿರ ರೂ. ದಾಟಿದ ಚಿನ್ನದ ದರ; 74500 ರೂ.ಗೆ ತಲುಪಿದ ಬೆಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳ್ಳಿ, ಚಿನ್ನಾಭರಣ ಖರೀದಿದಾರರಿಗೆ ಬಿಗ್ ಶಾಕ್: 57 ಸಾವಿರ ರೂ. ದಾಟಿದ ಚಿನ್ನದ ದರ; 74500 ರೂ.ಗೆ ತಲುಪಿದ ಬೆಳ್ಳಿ

ಬೆಂಗಳೂರು: ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ದರ ಶುಕ್ರವಾರ 10 ಗ್ರಾಂ ಗೆ 350 ರೂಪಾಯಿ ಹೆಚ್ಚಳವಾಗಿದೆ. ಬೆಳ್ಳಿ ದರ ಕೆಜಿಗೆ 1 ಸಾವಿರ ರೂಪಾಯಿ ಹೆಚ್ಚಳವಾಗಿದೆ.

ಇದರೊಂದಿಗೆ 24 ಕ್ಯಾರಟ್ ಚಿನ್ನದ ದರ 57,160 ರೂಪಾಯಿಗೆ ತಲುಪಿದೆ. 22 ಕ್ಯಾರಟ್ ನ ಆಭರಣ ಚಿನ್ನದ ದರ 52,400 ರೂ.ಗೆ ಏರಿಕೆಯಾಗಿದೆ. ಕೆಜಿಗೆ 1000 ರೂ. ಹೆಚ್ಚಳವಾಗಿರುವ ಬೆಳ್ಳಿ ದರ 74,500 ರೂ.ಗೆ ತಲುಪಿದೆ.

ಪ್ರಸಕ್ತ ವರ್ಷದಲ್ಲಿ ಚಿನ್ನದ ದರ ಏರುಗತಿಯಲ್ಲಿ ಮುಂದುವರೆಯಲಿದೆ. ಅಮೆರಿಕದಲ್ಲಿ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಇದ್ದು, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಹೆಚ್ಚಿಸತೊಡಗಿದ್ದಾರೆ. ಹೀಗಾಗಿ ಚಿನ್ನದ ದರ ಇನ್ನಷ್ಟು ಹೆಚ್ಚಳವಾಗಬಹುದೆಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...