alex Certify ಚಿನ್ನ, ಬೆಳ್ಳಿ ಇಂದಿನ ಹೊಸ ದರದ ಬಗ್ಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನ, ಬೆಳ್ಳಿ ಇಂದಿನ ಹೊಸ ದರದ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ದೆಹಲಿಯಲ್ಲಿ ಚಿನ್ನದ ಬೆಲೆ ಬುಧವಾರವೂ ಬಹುತೇಕ ಸ್ಥಿರವಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ಇಂದು 49,254 ರೂ.ಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ 49,253 ರೂ. ಇತ್ತು. ಇಂದು ಡಾಲರ್ ಎದುರು ರೂಪಾಯಿ 25 ಪೈಸೆಯಷ್ಟು ಸುಧಾರಣೆ ಕಂಡಿದ್ದು, ಈ ಕಾರಣದಿಂದಾಗಿ ಚಿನ್ನದ ಬೆಲೆ ಸ್ಥಿರವಾಗಿದೆ.

ಬೆಳ್ಳಿ ಬುಧವಾರ ಬೆಳ್ಳಿ ಕೆಜಿಗೆ 332 ರೂ. ಏರಿಕೆಯಾಗಿ 63,157 ರೂ. ತಲುಪಿದೆ. ಕಳೆದ ವಹಿವಾಟಿನ ದಿನದಂದು ಬೆಳ್ಳಿಯ ಬೆಲೆ ಕೆಜಿಗೆ 62,825 ರೂ. ಇತ್ತು.

ಹೆಚ್‌.ಡಿ.ಎಫ್‌.ಸಿ. ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಶೇ.0.24ರಷ್ಟು ಏರಿಕೆಯಾಗಿದೆ. ಚಿನ್ನವು ಪ್ರತಿ ಔನ್ಸ್‌ ಗೆ 1,857 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ ಗೆ 23.52 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...