alex Certify ಚಿನ್ನ ಖರೀದಿದಾರರಿಗೆ ಮುಖ್ಯ ಮಾಹಿತಿ, ಹಾಲ್ಮಾರ್ಕ್ ಜತೆಗೆ ಆಭರಣಕ್ಕೂ ಯುಐಡಿ ನಂಬರ್ ಕಡ್ಡಾಯ –ವರ್ತಕರಿಗೆ ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನ ಖರೀದಿದಾರರಿಗೆ ಮುಖ್ಯ ಮಾಹಿತಿ, ಹಾಲ್ಮಾರ್ಕ್ ಜತೆಗೆ ಆಭರಣಕ್ಕೂ ಯುಐಡಿ ನಂಬರ್ ಕಡ್ಡಾಯ –ವರ್ತಕರಿಗೆ ಬಿಗ್ ಶಾಕ್

ಚಿನ್ನಾಭರಣಗಳಿಗೆ ಹಾಲ್ಮಾರ್ಕ್ ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ವಿಶಿಷ್ಟ ಸಂಖ್ಯೆ(ಯುಐಡಿ) ಕೂಡ ಕಡ್ಡಾಯವಾಗಲಿದೆ. ವಾಹನಗಳಿಗೆ ನೋಂದಣಿ ಸಂಖ್ಯೆ ಇರುವಂತೆಯೇ ಎರಡು ಗ್ರಾಂಗಳಿಗಿಂತ ಹೆಚ್ಚಿನ ತೂಕದ ಚಿನ್ನಾಭರಣಗಳಿಗೆ ವಿಶಿಷ್ಟ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ.

ಕೇಂದ್ರ ಸರ್ಕಾರದ ಭಾರತ ಮಾನಕ ಸಂಸ್ಥೆಯು ಈ ಕಾನೂನು ಜಾರಿಗೆ ಮುಂದಾಗಿದ್ದು, ಚಿನ್ನಾಭರಣ ವರ್ತಕರು, ತಯಾರಕರು ತಮ್ಮಲ್ಲಿ ತಯಾರಾದ, ಮಾರಾಟವಾದ ಮತ್ತು ಉಳಿದ ಚಿನ್ನಾಭರಣಗಳು ಎಷ್ಟು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಭಾರತೀಯ ಮಾನಕ ಸಂಸ್ಥೆಗೆ ನೀಡಬೇಕಿದೆ.

ವಾಹನಗಳಿಗೆ ನೋಂದಣಿ ಸಂಖ್ಯೆ ಇರುವ ಮಾದರಿಯಲ್ಲಿ 2 ಗ್ರಾಂಗಳಿಗಿಂತ ಹೆಚ್ಚಿನ ಪ್ರತಿ ಚಿನ್ನಾಭರಣಕ್ಕೆ ವಿಶಿಷ್ಟ ಐಡಿ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...