alex Certify ಹೂಡಿಕೆದಾರರಿಗೆ‌ ಭರ್ಜರಿ ಗುಡ್‌ ನ್ಯೂಸ್: ಆ.3 ರಿಂದ ಚಿನ್ನದ ಬಾಂಡ್ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೂಡಿಕೆದಾರರಿಗೆ‌ ಭರ್ಜರಿ ಗುಡ್‌ ನ್ಯೂಸ್: ಆ.3 ರಿಂದ ಚಿನ್ನದ ಬಾಂಡ್ ವಿತರಣೆ

ನವದೆಹಲಿ: ಸವರಿನ್ ಚಿನ್ನದ ಬಾಂಡ್ ಗಳ ವಿತರಣೆ ಆಗಸ್ಟ್ 3ರಿಂದ ಆರಂಭವಾಗಲಿದ್ದು, ಪ್ರತಿ ಗ್ರಾಂಗೆ 5334 ರೂಪಾಯಿ ದರ ನಿಗದಿ ಮಾಡಲಾಗಿದೆ.
ಆಗಸ್ಟ್ 3 ರಿಂದ 7 ರವರೆಗೆ 2020 -21 ನೇ ಸಾಲಿನ ವಿ ಸರಣಿಯ ಚಿನ್ನದ ಬಾಂಡ್ ವಿತರಿಸಲಿದ್ದು, ಪ್ರತೀ ಗ್ರಾಂಗೆ 5334 ರೂಪಾಯಿ ಆಗಿರುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ.

999 ಶುದ್ಧತೆಯ ಚಿನ್ನದ ದರದ ಮೇಲೆ ಅತ್ಯಲ್ಪ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗಿದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಮಾಡುವ ಹೂಡಿಕೆದಾರರಿಗೆ ವಿತರಣೆ ಬೆಲೆಯಿಂದ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ನೀಡಲಿದ್ದು, ಡಿಜಿಟಲ್ ಪಾವತಿ ಮಾಡುವ ಹೂಡಿಕೆದಾರರಿಗೆ ಗೋಲ್ಡ್ ಬಾಂಡ್ ವಿತರಣೆ ಪ್ರತಿ ಗ್ರಾಂಗೆ 5284 ರೂಪಾಯಿ ನಿಗದಿ ಮಾಡಲಾಗಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿಯಲ್ಲಿ ಇರುವ ಯಾವುದೇ ನಿವಾಸಿ ಚಿನ್ನದ ಬಾಂಡ್ ಗಳಲ್ಲಿ ಹೂಡಿಕೆ ಮಾಡಬಹುದು. ಸಾರ್ವಜನಿಕ ಅಥವಾ ಖಾಸಗಿ ಸಂಸ್ಥೆಗಳು ಕೂಡ ಹೂಡಿಕೆ ಮಾಡಬಹುದು. ಅಪ್ರಾಪ್ತ ವಯಸ್ಕರ ಪರವಾಗಿ ಪೋಷಕರು ಹೂಡಿಕೆ ಮಾಡಬಹುದು. ಎನ್.ಆರ್.ಐ.ಗಳಿಗೆ ಹೂಡಿಕೆ ಮಾಡಲು ಸಾಧ್ಯವಿಲ್ಲವೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...