alex Certify ಮೀನು ಖಾದ್ಯ ಪ್ರಿಯರಿಗೆ ಭರ್ಜರಿ ಸುದ್ದಿ: ಹೊಸ ರುಚಿ ಸವಿಯುವ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನು ಖಾದ್ಯ ಪ್ರಿಯರಿಗೆ ಭರ್ಜರಿ ಸುದ್ದಿ: ಹೊಸ ರುಚಿ ಸವಿಯುವ ಅವಕಾಶ

ಬೆಂಗಳೂರು: ಆಲೂಗಡ್ಡೆ, ಬಾಳೆಕಾಯಿ, ಗೆಣಸು ಮೊದಲಾದ ಚಿಪ್ಸ್ ಗಳ ಮಾದರಿಯಲ್ಲೇ ಬೂತಾಯಿ ಮತ್ತು ರಾಣಿ ಮೀನಿನ ಚಿಪ್ಸ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ, ಮತ್ಸ್ಯ ಬಂಧನ ಸಂಸ್ಥೆಯ ಸಹಯೋಗದಲ್ಲಿ ಫಿಶ್ ವೇಪರ್ಸ್ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಹೆಚ್ಚು ಪೌಷ್ಟಿಕಾಂಶ ಇರುವ ವಾಸನೆ ರಹಿತ ಚಿಪ್ಸ್ ಗಳನ್ನು ಬಿಡುಗಡೆ ಮಾಡಲಾಗುವುದು. ವಿಟಮಿನ್ ಡಿ ಮತ್ತು ಬಿ 2 ಅಧಿಕವಾಗಿರುವ ಜೊತೆಗೆ ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿರುವ ಮೀನಿನ ಚಿಪ್ಸ್ ಗಳು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಳಿಗೆಗಳಲ್ಲಿ ಸಿಗಲಿವೆ.

ಇದರೊಂದಿಗೆ ಮೀನಿನ ಮಸಾಲೆಗಳನ್ನು ಸಿದ್ಧಪಡಿಸಿ ಮಾರಾಟ ಮಾಡಲಾಗುವುದು. ವಾಸನೆ ರಹಿತ ಪಾಲಕ್, ಕ್ಯಾರೆಟ್, ಟೊಮೇಟೊ, ಮೆಣಸಿನಕಾಯಿ ಮಸಾಲ ಮೊದಲಾದ ಪ್ಲೇವರ್ ಗಳಲ್ಲಿ ಬೂತಾಯಿ ಮತ್ತು ರಾಣಿ ಮೀನಿನ ಚಿಪ್ಸ್ ಗಳನ್ನು ಮಾರಾಟ ಮಾಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...