alex Certify ಖಾಸಗಿ ಮಾಹಿತಿಯೊಂದಿಗೂ ಸಂಪರ್ಕ ಹೊಂದಿದ ಆಧಾರ್ ಕಾರ್ಡ್ ಹೊಂದಿದವರಿಗೆ ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಸಗಿ ಮಾಹಿತಿಯೊಂದಿಗೂ ಸಂಪರ್ಕ ಹೊಂದಿದ ಆಧಾರ್ ಕಾರ್ಡ್ ಹೊಂದಿದವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ನಕಲಿ ಆಧಾರ್ ಕಾರ್ಡ್ ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(UIDAI) ತಿಳಿಸಿದ್ದು, ವಂಚನೆ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.

ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಸ್ವೀಕರಿಸುವ ಮೊದಲು ಪರಿಶೀಲನೆ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ. ಎಲ್ಲಾ 12 ಅಂಕಿಯ ಸಂಖ್ಯೆಗಳು ಆಧಾರ್ ಅಲ್ಲವೆಂದು ಶಾಸನಬದ್ಧ ಪ್ರಾಧಿಕಾರ ತಿಳಿಸಿದ್ದು, ಗುರುತಿನ ಪುರಾವೆಯಾಗಿ ಸ್ವೀಕರಿಸುವ ಮೊದಲು ಪರಿಶೀಲನೆ ಅಗತ್ಯವೆಂದು ಹೇಳಲಾಗಿದೆ.

ಯುಐಡಿಎಐ ನಿಂದ ಈ ಕುರಿತಾಗಿ ಮಹತ್ವದ ಮಾಹಿತಿ ನೀಡಲಾಗಿದ್ದು, ಎಲ್ಲಾ 12 ಅಂಕಿಯ ಸಂಖ್ಯೆಗಳು ಆಧಾರ್ ಆಗಿರುವುದಿಲ್ಲ. ಗುರುತಿನ ಪುರಾವೆಯಾಗಿ ಆಧಾರ್ ಸ್ವೀಕರಿಸುವ ಮೊದಲು ಪರಿಶೀಲನೆ ನಡೆಸಬೇಕು ಎಂದು ಶಿಫಾರಸು ಮಾಡಲಾಗಿದೆ. ಯಾವುದೇ ಆಧಾರ್ ಆನ್ಲೈನ್/ ಆಫ್ ಲೈನಲ್ಲಿ ಪರಿಶೀಲಿಸಬಹುದಾಗಿದೆ ಎಂದು ತಿಳಿಸಲಾಗಿದೆ.

ಸಾರ್ವಜನಿಕ ಯೋಜನೆಗಳು, ತೆರಿಗೆ ಸಂಬಂಧಿತ ಪ್ರಕ್ರಿಯೆ, ಕೊರೋನಾ ಲಸಿಕೆ ಪಡೆಯಲು ಅಗತ್ಯವಾದ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಒಂದಾಗಿದೆ. ಹಾಗಾಗಿ, ಅದರ ಪರಿಶೀಲನೆಯೂ ಅಗತ್ಯವಾಗಿದೆ. ಇನ್ನು ಬ್ಯಾಂಕ್ ಖಾತೆಗಳು ಮತ್ತು ಇತರ ಪ್ರಮುಖ ಸೇವೆಗಳೊಂದಿಗೆ, ಖಾಸಗಿ ಮಾಹಿತಿಯೊಂದಿಗೆ ಆಧಾರ್ ಸಂಪರ್ಕ ಹೊಂದಿದೆ. ಕೆಲವೊಮ್ಮೆ ಅಪರಾಧ ಚಟುವಟಿಕೆಯಲ್ಲಿ ಬಳಸಬಹುದಾದ ಸಿಮ್ ಕಾರ್ಡ್ ಖರೀದಿಸಲು ಬೇರೊಬ್ಬರ ಆಧಾರ್ ಕಾರ್ಡ್ ಸಹ ಬಳಸುತ್ತಾರೆ. ಆದ್ದರಿಂದ ಗುರುತಿನ ಪುರಾವೆಯಾಗಿ ಸ್ವೀಕರಿಸುವ ಮೊದಲು ಆಧಾರ್ ಕಾರ್ಡ್ ಪರಿಶೀಲನೆ ಬಹಳ ಮುಖ್ಯವೆನ್ನಲಾಗಿದೆ.

ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು ಯುಐಡಿಎಐ ಸರಳ ಹಂತಗಳನ್ನು ರೂಪಿಸಿದೆ. ಅದರ ಬಗ್ಗೆ ಮಾಹಿತಿ ಇಲ್ಲಿದೆ.

ಮೊದಲು UIDAI ಲಿಂಕ್‌ನಲ್ಲಿ ಲಾಗ್-ಇನ್ ಮಾಡಿ resident.uidai.gov.in/verify

ನಂತರ ನಿಮ್ಮ 12-ಅಂಕಿಯ ಸಂಖ್ಯೆ ಆಧಾರ್ ಕಾರ್ಡ್ ನಮೂದಿಸಿ,

ನಂತರ ಪರದೆಯು ಭದ್ರತಾ ಕೋಡ್ ಅಥವಾ ಕ್ಯಾಪ್ಚಾವನ್ನು ಕೇಳುತ್ತದೆ. ಕೋಡ್ ನಮೂದಿಸಿ.

‘ಪರಿಶೀಲಿಸಲು ಮುಂದುವರಿಯಿರಿ’ ಆಯ್ಕೆಯನ್ನು ಕ್ಲಿಕ್ ಮಾಡಿ.

12-ಅಂಕಿಯ ಸಂಖ್ಯೆಯ ಈ ದೃಢೀಕರಣದ ನಂತರ ನಿಮ್ಮ ಪರದೆಯಲ್ಲಿ ಕಾಣಿಸುತ್ತದೆ.

ಆಧಾರ್ ಕುರಿತು ಮಾಹಿತಿಯನ್ನು ನವೀಕರಿಸುವುದು ಹೇಗೆ?

ನೀವು ಆಧಾರ್ ಕಾರ್ಡ್‌ನಲ್ಲಿ ವಸತಿ ವಿಳಾಸ ಅಥವಾ ಫೋನ್ ಸಂಖ್ಯೆಯಂತಹ ಯಾವುದೇ ಮಾಹಿತಿಯನ್ನು ನವೀಕರಿಸಲು ಬಯಸಿದರೆ ಅದನ್ನು ಯುಐಡಿಎಐನ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕವೂ ಮಾಡಬಹುದು. ಆದಾಗ್ಯೂ, ಬಳಕೆದಾರರು ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ವಿಳಾಸದ ಪುರಾವೆಗಳನ್ನು ಹೊಂದಿರಬೇಕು. ಅಪೇಕ್ಷಿತ ಬದಲಾವಣೆಗಳನ್ನು ಮಾಡಲು ಬೇಕಾದ ಎಲ್ಲಾ ಹಂತಗಳನ್ನು ಆಧಾರ್ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...