alex Certify ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಖುಷಿ ಸುದ್ದಿ: ಹೆಚ್ಚಾಗಲಿದೆ ಎಥೆನಾಲ್ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಖುಷಿ ಸುದ್ದಿ: ಹೆಚ್ಚಾಗಲಿದೆ ಎಥೆನಾಲ್ ಬೆಲೆ

ಕಬ್ಬು ಬೆಳೆಗಾರರಿಗೆ ಸರ್ಕಾರ ಖುಷಿ ಸುದ್ದಿ ನೀಡ್ತಿದೆ. ಸರ್ಕಾರ ಎಥೆನಾಲ್ ಬೆಲೆಯನ್ನು ಲೀಟರ್‌ಗೆ 3 ರೂಪಾಯಿ ಹೆಚ್ಚಿಸುವ ಸಾಧ್ಯತೆಯಿದೆ. ಪೆಟ್ರೋಲಿಯಂ ಸಚಿವಾಲಯವು ಪ್ರಸ್ತಾವನೆಯನ್ನು ಸಂಪುಟಕ್ಕೆ ಕಳುಹಿಸಿದೆ.

ಮಾಹಿತಿಯ ಪ್ರಕಾರ, ಡಿಸೆಂಬರ್ 1ರಿಂದ ಹೊಸ ಬೆಲೆ ಜಾರಿಗೆ ಬರಲಿದೆ. ಎಥೆನಾಲ್  ಪ್ರತಿ ಲೀಟರ್‌ಗೆ 43.75 ರೂಪಾಯಿಗಳಿಂದ 59.48 ರೂಪಾಯಿ ಹೆಚ್ಚಾಗಲಿದೆ. ಎಥೆನಾಲ್ ಒಂದು ರೀತಿಯ ಆಲ್ಕೋಹಾಲ್. ಇದನ್ನು ಪೆಟ್ರೋಲ್ ನಲ್ಲಿ ಬೆರೆಸಿದ ನಂತರ ವಾಹನಗಳಲ್ಲಿ ಇಂಧನದಂತೆ ಬಳಸಬಹುದು. ಎಥೆನಾಲ್ ಮುಖ್ಯವಾಗಿ ಕಬ್ಬಿನ ಬೆಳೆಯಿಂದ ಉತ್ಪಾದಿಸಲಾಗುತ್ತದೆ. ಇದು ಕೃಷಿ ಮತ್ತು ಪರಿಸರ ಎರಡಕ್ಕೂ ಪ್ರಯೋಜನಕಾರಿ.

ಎಥೆನಾಲ್ ನವೀಕರಿಸಬಹುದಾದ ಶಕ್ತಿಯ ಮೂಲವಾಗಿದೆ. ಭಾರತದಲ್ಲಿ ಕಬ್ಬಿನ ಬೆಳೆಗೆ ಕೊರತೆಯಿಲ್ಲ. ಎಥೆನಾಲ್ ಬೆಲೆ ಹೆಚ್ಚಾದ್ರೆ ಕಬ್ಬಿನ ರೈತರಿಗೆ ಲಾಭವಾಗಲಿದೆ. ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರ ಬಾಕಿ ಹಣವನ್ನು ಸುಲಭವಾಗಿ ಪಾವತಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಎಥೆನಾಲ್ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಸಾಧ್ಯತೆಯಿದೆ.

ಉತ್ಪಾದನೆಯ ಹೆಚ್ಚಳದೊಂದಿಗೆ ಸರ್ಕಾರವು ಪೆಟ್ರೋಲ್‌ಗೆ ಶೇಕಡಾ 8 ರಷ್ಟು ಎಥೆನಾಲ್ ಸೇರಿಸುವ ಗುರಿ ಹೊಂದಿದೆ. ಮೂಲಗಳ ಪ್ರಕಾರ, ರಾಷ್ಟ್ರೀಯ ಜೈವಿಕ ಇಂಧನ ನೀತಿಯಡಿಯಲ್ಲಿ, 2022 ರ ವೇಳೆಗೆ ಶೇಕಡಾ 10ರಷ್ಟು ಎಥೆನಾಲ್ ಮಿಶ್ರಣವನ್ನು ಮತ್ತು 2030 ರ ವೇಳೆಗೆ ಶೇಕಡಾ 20 ರಷ್ಟು ಮಿಶ್ರಣದ ಗುರಿ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...