alex Certify BIG NEWS: ಲಾಕ್ ಡೌನ್ ನಿಂದಾಗಿದೆ 10 ಲಕ್ಷ ಕೋಟಿ ರೂ. ನಷ್ಟ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಾಕ್ ಡೌನ್ ನಿಂದಾಗಿದೆ 10 ಲಕ್ಷ ಕೋಟಿ ರೂ. ನಷ್ಟ..!

ಲಾಕ್ ಡೌನ್ ಭಾರತದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಸುಮಾರು 10 ಲಕ್ಷ ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ರೇಟಿಂಗ್ ಏಜೆನ್ಸಿ CRISIL ಇದನ್ನು ಅಂದಾಜು ಮಾಡಿದೆ.

ಕ್ರಿಸಿಲ್ 2020-2021ರ ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜು ಅರ್ಧದಷ್ಟು ಕಡಿಮೆ ಮಾಡಿ ಶೇಕಡಾ 1.8 ಕ್ಕೆ ಇಳಿಸಿದೆ. ಕೊರೊನಾ ವೈರಸ್ ನಿಯಂತ್ರಿಸಲು ಜಾರಿಗೆ ತಂದಿರುವ ಲಾಕ್ ಡೌನ್ ಆರ್ಥಿಕತೆಗೆ ಒಟ್ಟು 10 ಲಕ್ಷ ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಸಂಸ್ಥೆ ಹೇಳಿದೆ. ಸರಾಸರಿ  ಈ ನಷ್ಟವು ಪ್ರತಿ ವ್ಯಕ್ತಿಗೆ ಸುಮಾರು 7,000 ರೂಪಾಯಿ.

ಕೊರೊನಾದ ಕಾರಣದಿಂದಾಗಿ ಬಹುತೇಕ ಎಲ್ಲ ರೇಟಿಂಗ್ ಏಜೆನ್ಸಿಗಳು ಭಾರತೀಯ ಆರ್ಥಿಕತೆಯ ಬೆಳವಣಿಗೆಯ ಅಂದಾಜನ್ನು ತೀವ್ರವಾಗಿ ಕಡಿಮೆ ಮಾಡಿರುವುದು ಗಮನಿಸಬೇಕಾದ ಸಂಗತಿ. 2020 ರಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ದರವು ಶೇಕಡಾ 1.9 ಕ್ಕೆ ಹತ್ತಿರವಾಗಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ. ವಾಸ್ತವವಾಗಿ, ಕರೋನಾದ ಕಾರಣದಿಂದಾಗಿ ವಿಶ್ವದ ಹೆಚ್ಚಿನ ದೇಶಗಳ ಆರ್ಥಿಕತೆಯು ಕುಗ್ಗುತ್ತಿದೆ. ಈ ವರ್ಷವು 1930 ರ ಮಹಾ ಆರ್ಥಿಕ ಕುಸಿತದ ನಂತರದ ಅತಿದೊಡ್ಡ ಆರ್ಥಿಕ ಹಿಂಜರಿತವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...