alex Certify ಲಾಕ್ ಡೌನ್ ವೇಳೆ ಟಿವಿ ನೋಡುವವರಿಗೆ ಅಗ್ಗದ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ವೇಳೆ ಟಿವಿ ನೋಡುವವರಿಗೆ ಅಗ್ಗದ ಆಫರ್

लॉकडाउन के बीच TV देखने वालों के लिए सस्ते ऑफर, बिना रिचार्ज के देख सकते हैं कई बढ़िया चैनल!

ಲಾಕ್ ಡೌನ್ ಮಧ್ಯೆ ಜನರಿಗೆ ಮನರಂಜನೆ ನೀಡ್ತಿರುವುದು ಟಿವಿ. ಡಿಶ್ ಟಿವಿ, ಡಿಟಿಎಚ್ ಟಿವಿ ಹಲವಾರು ಕೊಡುಗೆಗಳು ಮತ್ತು ಪ್ಯಾಕೇಜ್‌ಗಳನ್ನು ಘೋಷಿಸಿದೆ. ಲಾಕ್‌ಡೌನ್ ಸಮಯದಲ್ಲಿ  ಸಂಪರ್ಕ ಮುಂದುವರಿಸಲು ಗ್ರಾಹಕರು ತಲೆಕೆಡಿಸಿಕೊಳ್ಳಬೇಕಾಗಿಲ್ಲ,  ಕಂಪನಿಯು ತ್ವರಿತ ಸಾಲ ಸೌಲಭ್ಯವನ್ನು ಪರಿಚಯಿಸಿದೆ. ಈ ಸೇವೆಯನ್ನು ಬಳಸುವ ಬಳಕೆದಾರರು ಪ್ರತ್ಯೇಕವಾಗಿ 10 ರೂಪಾಯಿಗಳ ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇದಲ್ಲದೆ ಅನೇಕ ಚಾನೆಲ್ ಗಳು ಉಚಿತ ಸೇವೆಗಳನ್ನು ನೀಡ್ತಿವೆ. ಡಿ 2 ಹೆಚ್ ಚಾನೆಲ್ 785 ನಲ್ಲಿ ರಂಜಾನ್ ಮುಬಾರಕ್ ಎಂಬ ಉಚಿತ ಶೋ ಪ್ರಾರಂಭಿಸಿದೆ. ಇದು ರಂಜಾನ್‌ಗೆ ಸಂಬಂಧಿಸಿದ ವಿಷಯವನ್ನು ತೋರಿಸುತ್ತದೆ ಇದಲ್ಲದೆ ಕಂಪನಿಯು ಹೊಸ ‘ವಿಶೇಷ ರಂಜಾನ್ ಕಾಂಬೊ’ವನ್ನು ಸಹ ಒದಗಿಸಿದೆ. ಇದು ಚಂದಾದಾರರಿಗೆ ಪ್ರಾದೇಶಿಕ ಸುದ್ದಿ ಚಾನೆಲ್‌ಗಳ ಜೊತೆಗೆ ಆಧ್ಯಾತ್ಮಿಕ ಇಸ್ಲಾಮಿಕ್ ಚಾನೆಲ್‌ಗಳನ್ನು 78.60 ರೂಪಾಯಿ ರೀಚಾರ್ಜ್‌ನಲ್ಲಿ ವೀಕ್ಷಿಸಲು ಅವಕಾಶ ನೀಡುತ್ತದೆ.

ಡಿಶ್ ಟಿವಿ ಬಳಕೆದಾರರ ಅನುಕೂಲಕ್ಕಾಗಿ ವಿಸ್ತೃತ ಚಂದಾದಾರಿಕೆ ಸೇವೆಯನ್ನು ಸಹ ನೀಡುತ್ತಿದೆ. ಸೆಟ್-ಟಾಪ್ ಬಾಕ್ಸ್ ಅನ್ನು ನಿಷ್ಕ್ರಿಯಗೊಳಿಸಿದರೆ ಚಂದಾದಾರರು ಪೇ ಲೆಟರ್ ಸೇವೆಯ ಲಾಭವನ್ನು ಪಡೆಯಬಹುದು. ಪೇ ಲೆಟರ್ ಸೇವೆಯ ಲಾಭ ಪಡೆಯಲು, ಬಳಕೆದಾರರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 1800-274-9050 ಗೆ ಕರೆ ಮಾಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...