alex Certify ಗಮನಿಸಿ…! ಡಿಎಲ್, LLR, ವಾಹನ ಖರೀದಿ, ನೋಂದಣಿ ಸೇರಿ ಎಲ್ಲದಕ್ಕೂ ಆಧಾರ್ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ…! ಡಿಎಲ್, LLR, ವಾಹನ ಖರೀದಿ, ನೋಂದಣಿ ಸೇರಿ ಎಲ್ಲದಕ್ಕೂ ಆಧಾರ್ ಕಡ್ಡಾಯ

ಕೇಂದ್ರ ಸರ್ಕಾರ ವಾಹನದ ನಕಲಿ ನೊಂದಣಿಗೆ ಕಡಿವಾಣ ಹಾಕಲು ವಾಹನ ಸಂಬಂಧಿತ ಎಲ್ಲಾ ವ್ಯವಹಾರಗಳಿಗೆ ಆಧಾರ್ ಕಡ್ಡಾಯಗೊಳಿಸಿದೆ.

ಹೊಸ ವಾಹನ ಖರೀದಿ, ವಾಹನ ಚಾಲನೆ ಪರವಾನಿಗೆ, ಕಲಿಕಾ ಪರವಾನಿಗೆ, ವಾಹನ ನೋಂದಣಿ, ಡಿಎಲ್ ನವೀಕರಣ, ವಿಳಾಸ ಬದಲಾವಣೆ, ಅಂತರಾಷ್ಟ್ರೀಯ ವಾಹನ ಚಾಲನೆ ಪರವಾನಿಗೆ, ವಾಹನಗಳ ತಾತ್ಕಾಲಿಕ ನೋಂದಣಿ ಸೇರಿದಂತೆ ವೆಹಿಕಲ್ ಸಂಬಂಧಿತ ಎಲ್ಲಾ ವ್ಯವಹಾರಗಳಿಗೆ ಆಧಾರ್ ಕಡ್ಡಾಯಗೊಳಿಸಲಾಗಿದೆ.

ಆಧಾರ್ ನೊಂದಿಗೆ ಸಂಯೋಜನೆಯಾಗಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬಂದ ಬಳಿಕವಷ್ಟೇ ವಾಹನ ಸಂಬಂಧಿತ ಎಲ್ಲಾ ರೀತಿಯ ವ್ಯವಹಾರಗಳು ಪೂರ್ಣಗೊಳ್ಳಲಿವೆ. ಈ ಮೂಲಕ ಒಬ್ಬ ವ್ಯಕ್ತಿಯ ಬಳಿ ಎಷ್ಟು ವೆಹಿಕಲ್ ಗಳಿವೆ ಎಂಬ ಮಾಹಿತಿ ಸರ್ಕಾರಕ್ಕೆ ಸಿಗಲಿದೆ. ಜೊತೆಗೆ ನಕಲಿ ನೋಂದಣಿ ಸೇರಿದಂತೆ ಇತರೆ ಅಕ್ರಮಗಳಿಗೆ ಬ್ರೇಕ್ ಹಾಕಬಹುದಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...