alex Certify ಏಪ್ರಿಲ್ ನಲ್ಲಿ ಒಂದೇ ಒಂದು ವಾಹನ ಮಾರಾಟ ಮಾಡಿಲ್ಲ ಮಾರುತಿ ಸುಜುಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಪ್ರಿಲ್ ನಲ್ಲಿ ಒಂದೇ ಒಂದು ವಾಹನ ಮಾರಾಟ ಮಾಡಿಲ್ಲ ಮಾರುತಿ ಸುಜುಕಿ

ಮಾರ್ಚ್ 25ರಿಂದ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇದು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ದೇಶದ ವಾಹನ ಉದ್ಯಮವೂ ದೊಡ್ಡ ನಷ್ಟವನ್ನು ಅನುಭವಿಸುವ ನಿರೀಕ್ಷೆಯಿದೆ. ಮಾರುತಿ ಸುಜುಕಿ ಲಾಕ್ ಡೌನ್ ನಲ್ಲಿ ಕಾರು ಮಾರಾಟದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.

ಕಳೆದ ಒಂದು ತಿಂಗಳಲ್ಲಿ ಒಂದೇ ಒಂದು ಮಾರುತಿ ಸುಜುಕಿ ಕಾರು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿಲ್ಲ. ಮಾರುತಿ ಸುಜುಕಿ ಏಪ್ರಿಲ್ ನಲ್ಲಿ ಒಂದೇ ಒಂದು ವಾಹನವನ್ನು ಮಾರಾಟ ಮಾಡಿಲ್ಲ. ಇದೇ ಮೊದಲ ಬಾರಿ ಕಂಪನಿಯ ಒಂದೇ ಒಂದು ವಾಹನ ಮಾರಾಟವಾಗಿಲ್ಲ. ಬಂದರುಗಳು ತೆರೆದ ನಂತರ ಕಂಪನಿಯು ಮುಂಡ್ರಾ ಬಂದರಿನಿಂದ 632 ಕಾರುಗಳನ್ನು ರಫ್ತು ಮಾಡಿದೆ. ರಫ್ತುಗಾಗಿ ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ.

ದೇಶದಲ್ಲಿ ಬಿಎಸ್ 6 ಜಾರಿಗೆ ಬಂದ ನಂತ್ರ ಆಟೋ ಕಂಪನಿಗಳಿಗೆ ಈಗಾಗಲೇ ಸಾಕಷ್ಟು ತೊಂದರೆಯಾಗಿದೆ. ಈ ಮಧ್ಯೆ ಜಾರಿಗೆ ಬಂದ ಲಾಕ್ ಡೌನ್ ನಿಂದಾಗಿ ಕಂಪನಿ ಶೂನ್ಯ ವ್ಯಾಪಾರ ನಡೆಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...