alex Certify ಹ್ಯಾಂಡ್ ಸ್ಯಾನಿಟೈಜರ್ ರಫ್ತು ಮಾಡಲು ಕೇಂದ್ರದ ಸಿದ್ಧತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹ್ಯಾಂಡ್ ಸ್ಯಾನಿಟೈಜರ್ ರಫ್ತು ಮಾಡಲು ಕೇಂದ್ರದ ಸಿದ್ಧತೆ

ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್‌ಗಳ ರಫ್ತು ಪುನರಾರಂಭಿಸುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಅನ್ವೇಷಿಸುತ್ತಿದೆ. ಕೇಂದ್ರ ಔಷಧ ನಿಯಂತ್ರಕವು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್‌ಗಳ ಉತ್ಪಾದನಾ ಸಾಮರ್ಥ್ಯದ ವಿವರಗಳನ್ನು ಕೋರಿದೆ.

ದೇಶೀಯ ಬೇಡಿಕೆಯನ್ನು ಪೂರೈಸುವ ಸ್ಥಿತಿಯಲ್ಲಿ ಭಾರತವಿದೆಯೇ  ಎಂದು ಖಚಿತಪಡಿಸಿಕೊಳ್ಳಲು ಶುಕ್ರವಾರ ಮಧ್ಯಾಹ್ನದೊಳಗೆ ವಿವರಗಳನ್ನು ನೀಡುವಂತೆ ಸೂಚನೆ ನೀಡಿದೆ. ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ತೀವ್ರ ಏರಿಕೆಯ ನಂತ್ರ ಜಾರಿಯಾದ ಲಾಕ್ ಡೌನ್ ವೇಳೆ ಹ್ಯಾಂಡ್ ಸ್ಯಾನಿಟೈಜರ್ ರಫ್ತನ್ನು ಸರ್ಕಾರ ನಿಷೇಧಿಸಿತ್ತು.

ಲಾಕ್ ಡೌನ್ ವೇಳೆ ಅನೇಕ ಕಂಪನಿಗಳು ಹ್ಯಾಂಡ್ ಸ್ಯಾನಿಟೈಜರ್ ತಯಾರಿಕೆ ಮುಂದುವರೆಸಿದ್ದವು. ಈಗ ಮಾರುಕಟ್ಟೆಯಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಸಾಕಷ್ಟಿದೆ ಎನ್ನಲಾಗ್ತಿದೆ. ಎಲ್ಲ ರಾಜ್ಯಗಳು ಈ ಬಗ್ಗೆ ವರದಿ ನೀಡಿದ ನಂತ್ರ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...