alex Certify ದೇಶದ ಈ ರಾಜ್ಯಗಳ ಗ್ರಾಹಕರಿಗೆ ಬಿಎಸ್​ಎನ್​ಎಲ್​ ಬಂಪರ್ ಆಫರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಈ ರಾಜ್ಯಗಳ ಗ್ರಾಹಕರಿಗೆ ಬಿಎಸ್​ಎನ್​ಎಲ್​ ಬಂಪರ್ ಆಫರ್​

ಬಿಎಸ್​ಎನ್​ಎಲ್​ ದೇಶದ ಆಯ್ದ ರಾಜ್ಯಗಳಿಗೆ 365 ರೂಪಾಯಿಗಳ ಪ್ರಿಪೇಯ್ಡ್​ ರೀಚಾರ್ಜ್​ನ್ನು ಪರಿಚಯಿಸಿದೆ. ಈ ಹೊಸ ಪ್ಲಾನ್​​ನಲ್ಲಿ ದಿನಕ್ಕೆ 250 ನಿಮಿಷ ಉಚಿತ ಕರೆ, 2 ಜಿಬಿ ದೈನಂದಿನ ಡೇಟಾ ಹಾಗೂ ದಿನಕ್ಕೆ 100 ಉಚಿತ ಎಸ್ಎಂಸ್​ ಸೌಕರ್ಯ ನೀಡಲಿದೆ.

ಈ ಪ್ಲಾನ್​ಗೆ 365 ದಿನಗಳ ವ್ಯಾಲಿಡಿಟಿ ಇದ್ದರೂ ಸಹ ಈ ಉಚಿತ ಸೌಕರ್ಯಗಳು ಕೇವಲ 60ದಿನಗಳವರೆಗೆ ಮಾತ್ರ ಇರಲಿದೆ. ಇದಾದ ಬಳಿಕ ನೀವು ಪ್ರತ್ಯೇಕ ರಿಚಾರ್ಜ್ ಮಾಡಿಕೊಳ್ಳಬೇಕಾಗುತ್ತೆ.

ಪ್ರಸ್ತುತ ಈ ರಿಚಾರ್ಜ್ ಪ್ಲಾನ್​ ಕೇರಳದಲ್ಲಿ ಮಾತ್ರ ಲಭ್ಯವಿದೆ. ಆದರೆ ಇದು ಸದ್ಯದಲ್ಲೇ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ- ಜಾರ್ಖಂಡ್​, ಗುಜರಾತ್​, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಕೋಲ್ಕತ್ತಾ – ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಭ್ಯವಿರಲಿದೆ.

ಉಚಿತ ಸೌಕರ್ಯಗಳು ಪೂರ್ಣಗೊಂಡ ಬಳಿಕ ಶುಲ್ಕಗಳು ಆರಂಭವಾಗುತ್ತದೆ. 2 ಜಿಬಿ ದೈನಂದಿನ ಮಿತಿ ಮೀರಿದ ಬಳಿಕ ಡೇಟಾ ವೇಗ 80 ಕೆಬಿಪಿಎಸ್​ಗೆ ಇಳಿಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...