alex Certify ನಿಮ್ಮ ಸ್ಮಾರ್ಟ್‌ ಫೋನ್‌ ಗೂ ಬಂದಿದೆಯಾ ʼಎಮರ್ಜೆನ್ಸಿ ಅಲರ್ಟ್‌ʼ ಮೆಸೇಜ್‌ ? ಇಲ್ಲಿದೆ ಇದರ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಸ್ಮಾರ್ಟ್‌ ಫೋನ್‌ ಗೂ ಬಂದಿದೆಯಾ ʼಎಮರ್ಜೆನ್ಸಿ ಅಲರ್ಟ್‌ʼ ಮೆಸೇಜ್‌ ? ಇಲ್ಲಿದೆ ಇದರ ಸಂಪೂರ್ಣ ವಿವರ

ಕೇಂದ್ರ ಸರ್ಕಾರ ಸ್ಮಾರ್ಟ್‌ಫೋನ್‌ಗಳ ಎಮೆರ್ಜೆನ್ಸಿ ಅಲರ್ಟ್‌ ಸಿಸ್ಟಮ್‌ ಅನ್ನು ಪರೀಕ್ಷಿಸಿದೆ. ಇದಕ್ಕಾಗಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮಾದರಿ ಸಂದೇಶವನ್ನು ಕಳುಹಿದೆ. ದೇಶಾದ್ಯಂತ ಅನೇಕ ಮೊಬೈಲ್‌ ಬಳಕೆದಾರರಿಗೆ ಜೋರಾದ ಬೀಪ್‌ ಮತ್ತು ಫ್ಲ್ಯಾಷ್ ರಿಸೀವ್‌ ಆಗಿದೆ.

‘ಎಮರ್ಜೆನ್ಸಿ ಅಲರ್ಟ್‌ ಸೀವಿಯರ್‌’ ಎಂದು ಇದರಲ್ಲಿ ಬರೆಯಲಾಗಿತ್ತು. ಈ ಸಂದೇಶವು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಅಲರ್ಟ್‌ ನೀಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಜಾರಿಗೆ ತರುತ್ತಿರುವ ಪ್ಯಾನ್-ಇಂಡಿಯಾದ ತುರ್ತು ಎಚ್ಚರಿಕೆ ವ್ಯವಸ್ಥೆಯ ಭಾಗವಾಗಿದೆ.

ಟೆಲಿಕಮ್ಯುನಿಕೇಶನ್ ಇಲಾಖೆಯ (C-DOT) ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ Jio ಮತ್ತು BSNL ಬಳಕೆದಾರರಿಗೆ ಗುರುವಾರ ಮಧ್ಯಾಹ್ನ 1:30ಕ್ಕೆ ಫ್ಲಾಶ್ ಸಂದೇಶವನ್ನು ಕಳುಹಿಸಲಾಗಿದೆ. ಇದು ಪರೀಕ್ಷಾರ್ಥ ಮೆಸೇಜ್‌, ಹಾಗಾಗಿ ಮೊಬೈಲ್‌ ಬಳಕೆದಾರರು ಗಾಬರಿಯಾಗುವ ಅಗತ್ಯವಿಲ್ಲ. ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶ ಇದು. ಈ ಮೆಸೇಜ್‌ಗೆ ಬಳಕೆದಾರರು ಪ್ರತಿಕ್ರಿಯಿಸಬೇಕಿಲ್ಲ. ಈ ಸಂದೇಶವನ್ನು ನಿರ್ಲಕ್ಷಿಸಿ.

ಸಾರ್ವಜನಿಕರ ಸುರಕ್ಷತೆಯನ್ನು ಹೆಚ್ಚಿಸುವುದು ಮತ್ತು ತುರ್ತು ಸಂದರ್ಭಗಳಲ್ಲಿ ಸಮಯೋಚಿತ ಎಚ್ಚರಿಕೆಗಳನ್ನು ಒದಗಿಸುವುದು ಈ ಯೋಜನೆಯ ಗುರಿ.  ದೂರಸಂಪರ್ಕ ಇಲಾಖೆಯ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಪ್ರಕಾರ, ಇದೇ ರೀತಿಯ ಪರೀಕ್ಷೆಗಳನ್ನು ವಿವಿಧ ಪ್ರದೇಶಗಳಲ್ಲಿ ನಡೆಸಲಾಗುತ್ತದೆ. ಮೊಬೈಲ್ ಆಪರೇಟರ್‌ಗಳ ತುರ್ತು ಎಚ್ಚರಿಕೆ ಪ್ರಸಾರ ಸಾಮರ್ಥ್ಯಗಳು ಮತ್ತು ಸೆಲ್ ಪ್ರಸಾರ ವ್ಯವಸ್ಥೆಗಳ ದಕ್ಷತೆ ಹಾಗೂ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಇದನ್ನು ಮಾಡಲಾಗುತ್ತದೆ.ಈ ಬಗ್ಗೆ ಸಿ-ಡಾಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜ್‌ಕುಮಾರ್ ಉಪಾಧ್ಯಾಯ ಮಾಹಿತಿ ನೀಡಿದ್ದಾರೆ.

ಈ ತಂತ್ರಜ್ಞಾನವು ಪ್ರಸ್ತುತ ವಿದೇಶಿ ಮಾರಾಟಗಾರರ ಮೂಲಕ ಮಾತ್ರ ಲಭ್ಯವಿದೆ. ಆದ್ದರಿಂದ ಸಿ-ಡಾಟ್ ಇದನ್ನು ಆಂತರಿಕವಾಗಿ ಅಭಿವೃದ್ಧಿಪಡಿಸುತ್ತಿದೆ ಎಂದವರು ತಿಳಿಸಿದ್ದಾರೆ. “ಸೆಲ್ ಬ್ರಾಡ್‌ಕಾಸ್ಟ್ ತಂತ್ರಜ್ಞಾನವು ಅಭಿವೃದ್ಧಿ ಹಂತದಲ್ಲಿದೆ. ವಿಪತ್ತಿನ ಸಮಯದಲ್ಲಿ ಮೊಬೈಲ್ ಫೋನ್‌ಗಳಿಗೆ ನೇರವಾಗಿ ಎಚ್ಚರಿಕೆಗಳನ್ನು ಕಳುಹಿಸಲು ಎನ್‌ಡಿಎಂಎ ಇದನ್ನು ಅಳವಡಿಸುತ್ತದೆ. ಇದನ್ನು ಪ್ರಸ್ತುತ ಜಿಯೋ ಮತ್ತು ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ಗಳಲ್ಲಿ ಪರೀಕ್ಷಿಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...