alex Certify ಈ ಯೋಜನೆಯಲ್ಲಿ ಮೇ 19 ರವರೆಗೆ ಸಿಗಲಿದೆ ಉಚಿತ ಇಂಟರ್ನೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಯೋಜನೆಯಲ್ಲಿ ಮೇ 19 ರವರೆಗೆ ಸಿಗಲಿದೆ ಉಚಿತ ಇಂಟರ್ನೆಟ್

ಗ್ರಾಹಕರ ಅನುಕೂಲಕ್ಕಾಗಿ ಭಾರತ್ ಸಂಚಾರ್ ನಿಗಮ ಲಿಮಿಟೆಡ್ ಕಳೆದ ತಿಂಗಳು “ವರ್ಕ್ @ ಹೋಮ್” ಪ್ರಚಾರ ಬ್ರಾಡ್ಬ್ಯಾಂಡ್ ಯೋಜನೆಯನ್ನು ಪರಿಚಯಿಸಿದೆ.

ಇದರ ಅಡಿಯಲ್ಲಿ ಕಂಪನಿಯ ಎಲ್ಲಾ ಬ್ರಾಡ್ಬ್ಯಾಂಡ್ ಬಳಕೆದಾರರು ದಿನಕ್ಕೆ 5 ಜಿಬಿ ಡೇಟಾವನ್ನು ಉಚಿತವಾಗಿ ಪಡೆಯುತ್ತಾರೆ. ವಿಶೇಷವೆಂದರೆ ಈ ಉಚಿತ ಡೇಟಾದ ವೇಗ 10 ಎಂಬಿಪಿಎಸ್  ಆಗಿರುತ್ತದೆ.

ಬಿಎಸ್ಎನ್ಎಲ್ ಈಗ ಈ ಯೋಜನೆಯ ಮಾನ್ಯತೆಯನ್ನು ಮೇ 19 ರವರೆಗೆ ವಿಸ್ತರಿಸಿದೆ. ಈ ಮೊದಲು ಈ ಯೋಜನೆಯಡಿಯಲ್ಲಿ, ಏಪ್ರಿಲ್ 19 ರವರೆಗೆ ಉಚಿತ ಡೇಟಾ ಲಭ್ಯವಿತ್ತು. ಬಿಎಸ್ಎನ್ಎಲ್ ಟ್ವೀಟ್ ಮಾಡುವ ಮೂಲಕ ಮಾಹಿತಿಯನ್ನು ನೀಡಿದೆ. ಬಿಎಸ್‌ಎನ್‌ಎಲ್‌ನ ಈ ಯೋಜನೆ ದೇಶದ ಎಲ್ಲ ಲ್ಯಾಂಡ್‌ಲೈನ್ ಬಳಕೆದಾರರಿಗೆ ಲಭ್ಯವಿರುತ್ತದೆ.

ಹೊಸ ಕೊಡುಗೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಲ್ಯಾಂಡ್‌ ಲೈನ್ ಬಳಕೆದಾರರು 1800-345-1504 ಗೆ ಕರೆ ಮಾಡಬಹುದು.  ಬಿಎಸ್‌ಎನ್‌ಎಲ್ ಇತ್ತೀಚೆಗೆ ಪೋಸ್ಟ್‌ಪೇಯ್ಡ್ ಯೋಜನೆ ಗ್ರಾಹಕರಿಗೆ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಉಚಿತವಾಗಿ ನೀಡುವ ಘೋಷಣೆ ಮಾಡಿದೆ. ಅಮೆಜಾನ್ ಪ್ರೈಮ್ನ ಚಂದಾದಾರಿಕೆ ಪೋಸ್ಟ್ ಪೇಯ್ಡ್ ಯೋಜನೆಗಳೊಂದಿಗೆ ಲಭ್ಯವಿರುತ್ತದೆ, ಇದರ ಬೆಲೆ 399 ರೂಪಾಯಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...