alex Certify ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್‌ ನ್ಯೂಸ್: IRCTC ನಲ್ಲಿ ಟಿಕೆಟ್ ಬುಕ್ ಮಾಡಿದ್ರೆ 2 ಸಾವಿರದವರೆಗೆ ಕ್ಯಾಶ್‌ ಬ್ಯಾಕ್ ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್‌ ನ್ಯೂಸ್: IRCTC ನಲ್ಲಿ ಟಿಕೆಟ್ ಬುಕ್ ಮಾಡಿದ್ರೆ 2 ಸಾವಿರದವರೆಗೆ ಕ್ಯಾಶ್‌ ಬ್ಯಾಕ್ ..!

ರೈಲು ಟಿಕೆಟ್ ಬುಕ್ ಮಾಡಲು ನೀವು ಐಆರ್ಸಿಟಿಸಿ ಬಳಸ್ತಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಐಆರ್ಸಿಟಿಸಿ ಐಮುದ್ರಾದಲ್ಲಿ  ಗ್ರಾಹಕರಿಗೆ ಭರ್ಜರಿ ಕ್ಯಾಶ್ಬ್ಯಾಕ್ ನೀಡ್ತಿದೆ. ಐಆರ್ಸಿಟಿಸಿ ಈ ಕ್ಯಾಶ್ಬ್ಯಾಕ್ ಆಫರ್ ಫೆಬ್ರವರಿ 28ರವರೆಗೆ ಜಾರಿಯಲ್ಲಿರಲಿದೆ.

ಐಆರ್ಸಿಟಿಸಿಯ ಐಮುದ್ರಾ ಅಪ್ಲಿಕೇಷನ್ ನಲ್ಲಿ ವೀಸಾ ಕಾರ್ಡ್ ಅಥವಾ ರುಪೇ ಮೂಲಕ ಖರೀದಿ ಮಾಡಿದ್ರೆ ನಿಮಗೆ 2000 ರೂಪಾಯಿವರೆಗೆ ಕ್ಯಾಶ್ಬ್ಯಾಕ್ ಸಿಗಲಿದೆ. ಐಆರ್ಸಿಟಿಸಿ ಐಮುದ್ರಾ ಟ್ವೀಟರ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಗ್ರಾಹಕರು 5 ಸಾವಿರಕ್ಕಿಂತ ಹೆಚ್ಚು ಹಣ ಖರ್ಚು ಮಾಡಿದ್ರೆ 2 ಸಾವಿರ ರೂಪಾಯಿವರೆಗೆ ಕ್ಯಾಶ್ಬ್ಯಾಕ್ ಸಿಗಲಿದೆ.

ಐಆರ್ಸಿಟಿಸಿ ಐಮುದ್ರಾವನ್ನು ಫೆಡರರ್ ಬ್ಯಾಂಕ್ ಜೊತೆ ಸೇರಿ ಶುರು ಮಾಡಿದೆ. ನೀವು ಮೊದಲು ಐಮುದ್ರಾಕ್ಕೆ ಹಣ ಹಾಕಬೇಕು. ಡೆಬಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಹಣ ವರ್ಗಾಯಿಸಬೇಕು. ನಂತ್ರ ಐಮುದ್ರಾದ ವೀಸಾ, ರುಪೇ ಮೂಲಕ 5 ಸಾವಿರ ರೂಪಾಯಿವರೆಗೆ ಖರ್ಚು ಮಾಡಬೇಕು. ರೈಲು, ವಿಮಾನ, ಬಸ್ ಟಿಕೆಟ್ ಕಾಯ್ದಿರಿಸುವುದ್ರಿಂದ ಹಿಡಿದು ಶಾಪಿಂಗ್ ವರೆಗೆ ಹೇಗೆ ಬೇಕಾದ್ರೂ ನೀವು 5 ಸಾವಿರ ರೂಪಾಯಿ ಖರ್ಚು ಮಾಡಬಹುದು. ಐಮುದ್ರಾ ಭೌತಿಕ ಕಾರ್ಡ್ ಕೂಡ ನಿಮಗೆ ಸಿಗುತ್ತದೆ. ಈ ಕಾರ್ಡ್ ಎಟಿಎಂ ಕಾರ್ಡ್ ನಂತೆ ಕೆಲಸ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...