alex Certify ದಂಗಾಗಿಸುವಂತಿದೆ BMW ಹೊಸ ಬೈಕ್‌ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ BMW ಹೊಸ ಬೈಕ್‌ ಬೆಲೆ

ಬಿಎಂಡಬ್ಲೂ ಭಾರತದಲ್ಲಿ ಆಲ್​ ನ್ಯೂ ಬಿಎಂಡಬ್ಲೂ ಎಂ 1000 ಆರ್​ ಆರ್​​​ ಎಂಬ ಎಂ ಮಾಡೆಲ್​ನ ಮೊದಲ ಶ್ರೇಣಿಯ ಬೈಕ್​ನ್ನು ಭಾರತದಲ್ಲಿ ಲಾಂಚ್​ ಮಾಡಿದೆ. ಈ ಬೈಕ್​ನ ಬೆಲೆ 42 ಲಕ್ಷ ರೂಪಾಯಿಯಾಗಿದ್ದು, ಆನ್‌ ರೋಡ್ ಬೆಲೆ 45 ಲಕ್ಷ ರೂಪಾಯಿ ಆಗಲಿದೆ ಎಂದು ಕಂಪನಿ ಹೇಳಿದೆ.

ಬಿಎಂಡಬ್ಲೂ ಎಂ 1000 ಆರ್​​ ಆರ್ ಬೈಕ್​ ತಿಳಿ ಬಿಳಿ ಬಣ್ಣ , ರೇಸಿಂಗ್​ ಬ್ಲೂ ಮೆಟಾಲಿಗ್​ ಹಾಗೂ ಕೆಂಪು ಬಣ್ಣದಲ್ಲಿ ಲಭ್ಯವಿದೆ.‌

ಬಿಎಂಡಬ್ಲೂ ಎಂ 1000 ಆರ್​​ ಆರ್ ಬೈಕ್ ಇದು ಬಿಎಂಡಬ್ಲೂನ ಮೊದಲ ಎಂ ಮಾಡೆಲ್​ ಆಗಿದೆ.

ಎಂ ಆರ್​ ಆರ್​ನಲ್ಲಿ ಇಂಟಿಗ್ರೇಟೆಡ್​ ಎಲ್​ಇಡಿ ಹೆಡ್​​ಲೈಟ್​ಗಳು ಹಾಗೂ ಅಸಿಮೆಟ್ರಿಕಲ್​ ಕಲರ್​ ಅರೆಂಜ್​ಮೆಂಟ್​ ಹಾಗೂ ಬಹು ಕಾರ್ಯ ನಿರ್ವಹಿಸಬಲ್ಲ ಇನ್​ಸ್ಟ್ರುಮೆಂಟ್​ ಪ್ಯಾನೆಲ್​​ ಅಳವಡಿಸಲಾಗಿದೆ.

ನಗುವಂತೆ ಮಾಡಿದೆ unworried ಶಬ್ದಕ್ಕೆ ʼಗೂಗಲ್ʼ‌ ನೀಡಿದ ಅರ್ಥ

ಬಿಎಂಡಬ್ಲೂ ಎಂ 1000 ಆರ್​​ ಆರ್ ಬೈಕ್​​ನಲ್ಲಿ 4 ಆಯಿಲ್​ ಕೂಲ್ಡ್ ಸಿಲಿಂಡರ್​ ಇನ್​ ಲೈನ್​ ಇಂಜಿನ್​ ಇದೆ. ಇದೊಂದು ಅತ್ಯುತ್ತಮ ರೇಸಿಂಗ್​ ಇಂಜಿನ್​ ಆಗಿದೆ. ಈ ಬೈಕ್​ನಲ್ಲಿ ನೀವು ಗಂಟೆಗೆ 306 ಕಿಲೋಮೀಟರ್​ ವೇಗದಲ್ಲಿ ಪ್ರಯಾಣಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...