alex Certify RBI ರೆಪೊ ದರ ಹೆಚ್ಚಳ ಬೆನ್ನಲ್ಲೇ ಬಡ್ಡಿ ದರ ಏರಿಕೆ ಶಾಕ್: ರೆಪೊ ಆಧಾರಿತ ಸಾಲ ದರ ಹೆಚ್ಚಿಸಿದ ಬ್ಯಾಂಕ್ ಆಫ್ ಇಂಡಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RBI ರೆಪೊ ದರ ಹೆಚ್ಚಳ ಬೆನ್ನಲ್ಲೇ ಬಡ್ಡಿ ದರ ಏರಿಕೆ ಶಾಕ್: ರೆಪೊ ಆಧಾರಿತ ಸಾಲ ದರ ಹೆಚ್ಚಿಸಿದ ಬ್ಯಾಂಕ್ ಆಫ್ ಇಂಡಿಯಾ

ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಇಂಡಿಯಾ(BOI) ಇಂದಿನಿಂದ ಜಾರಿಗೆ ಬರುವಂತೆ ರೆಪೊ ಆಧಾರಿತ ಸಾಲಗಳ ದರವನ್ನು 35 bps ಹೆಚ್ಚಿಸಿದೆ.

6.25% ರ ಪರಿಷ್ಕೃತ ರೆಪೋ ದರದ ಪ್ರಕಾರ ಡಿಸೆಂಬರ್ 7 ರಿಂದ ರೆಪೋ ಆಧಾರಿತ ಸಾಲದ ದರ(RBLR) 9.10% ಆಗಿದೆ. BOI ತನ್ನ ವೆಬ್‌ ಸೈಟ್‌ ನಲ್ಲಿ ಪರಿಷ್ಕೃತ ರೆಪೋ ದರದ ಪ್ರಕಾರ(6.25%) ಪರಿಣಾಮಕಾರಿ RBLR w.e.f 07.12.2022 9.10% ಆಗಿದೆ ಎಂದು ತಿಳಿಸಿದೆ.

RBI ಯ ರೆಪೊ ದರಕ್ಕೆ ಸಂಬಂಧಿಸಿರುವ ಸಾಲದ ದರವನ್ನು ರೆಪೊ-ಲಿಂಕ್ಡ್ ಲೆಂಡಿಂಗ್ ದರ ಅಥವಾ RLLR ಎಂದು ಕರೆಯಲಾಗುತ್ತದೆ. ಅಕ್ಟೋಬರ್ 1, 2019 ರಿಂದ, ಬ್ಯಾಂಕುಗಳಿಂದ ಅನುಮೋದಿಸಲಾದ ಫ್ಲೋಟಿಂಗ್ ದರದ ಚಿಲ್ಲರೆ ಸಾಲಗಳನ್ನು ಬಾಹ್ಯ ಮಾನದಂಡದ ಸಾಲದ ದರಗಳಿಗೆ(E-BLR) ಲಿಂಕ್ ಮಾಡಲಾಗಿದೆ. ಇದರ ಪರಿಣಾಮವಾಗಿ ಹೆಚ್ಚಿನ ಬ್ಯಾಂಕ್ ಗಳು ರೆಪೊ ದರವನ್ನು ತಮ್ಮ ಮಾನದಂಡವಾಗಿ ಅಳವಡಿಸಿಕೊಂಡಿವೆ. ಬ್ಯಾಂಕ್‌ ಗಳು ತಮ್ಮದೇ ಆದ ರೆಪೊ ಲಿಂಕ್ಡ್ ಸಾಲದ ದರವನ್ನು ಹೊಂದಿದ್ದು, ಪ್ರತಿ ಬಾರಿ ಆರ್‌ಬಿಐ ರೆಪೊ ದರವನ್ನು ಬದಲಾಯಿಸುತ್ತಿದ್ದಂತೆ ಬದಲಾವಣೆ ಮಾಡುತ್ತವೆ. BOI ಯ RLLR ದರವು ಡಿಸೆಂಬರ್‌ನ ನೀತಿ ಸಭೆಯಲ್ಲಿ ಇಂದು ಘೋಷಿಸಲಾದ RBI ಯ 35 bps ರೆಪೊ ದರ ಹೆಚ್ಚಳಕ್ಕೆ ಅನುಗುಣವಾಗಿ ಏರಿಕೆ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...