alex Certify ಗ್ರಾಹಕರೇ ಗಮನಿಸಿ: ಇಂದಿನಿಂದ ಬಳಸಬೇಡಿ ಈ ಬ್ಯಾಂಕ್​ಗಳ ಹಳೆ IFSC ಕೋಡ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರೇ ಗಮನಿಸಿ: ಇಂದಿನಿಂದ ಬಳಸಬೇಡಿ ಈ ಬ್ಯಾಂಕ್​ಗಳ ಹಳೆ IFSC ಕೋಡ್​

ಓರಿಯಂಟಲ್​ ಬ್ಯಾಂಕ್​ ಆಫ್​ ಕಾಮರ್ಸ್​, ಯುನೈಟೆಡ್​ ಬ್ಯಾಂಕ್​ ಆಫ್​ ಇಂಡಿಯಾ, ಸಿಂಡಿಕೇಟ್​ ಬ್ಯಾಂಕ್​, ಆಂಧ್ರ ಬ್ಯಾಂಕ್​ ಹಾಗೂ ಅಲಹಾಬಾದ್​ ಬ್ಯಾಂಕ್​​ನ ಗ್ರಾಹಕರು ಬ್ಯಾಂಕಿಂಗ್​ ವ್ಯವಹಾರಕ್ಕೆ ಹೊಸ ಐಎಫ್​ಎಸ್​ಸಿ ಕೋಡ್​ಗಳನ್ನ ಬಳಕೆ ಮಾಡೋದು ಒಳಿತು. ನೀವೇನಾದರೂ ಇನ್ನೂ ಹಳೆಯ ಐಎಫ್​ಎಸ್​ಸಿ ಕೋಡ್​ಗಳನ್ನೇ ಬಳಕೆ ಮಾಡುತ್ತಿದ್ದರೆ ನಿಮ್ಮ ವ್ಯವಹಾರಗಳು ವಿಫಲಗೊಳ್ಳಲಿವೆ.

ಆಕ್ಸಿಸ್​​ ಬ್ಯಾಂಕ್​​​ ತನ್ನ ಗ್ರಾಹಕರಿಗೆ ಈ ಸಂಬಂಧ ಮಹತ್ವದ ಸೂಚನೆಯೊಂದನ್ನ ನೀಡಿದೆ. ಆರ್​​ಬಿಐನ ಸೂಚನೆಯಂತೆ ಓರಿಯಂಟಲ್​ ಬ್ಯಾಂಕ್​ ಆಫ್​ ಕಾಮರ್ಸ್ ಹಾಗೂ ಯುನೈಟೆಡ್​ ಬ್ಯಾಂಕ್​ ಆಫ್​ ಇಂಡಿಯಾದ ಐಎಫ್​ಎಸ್​ಸಿ ಕೋಡ್​ಗಳನ್ನ ನಿಷ್ಕ್ರಿಯಗೊಳಿಸಲಾಗಿದೆ. ಹೀಗಾಗಿ ಈ ಬ್ಯಾಂಕ್​ನ ಐಎಫ್​ಎಸ್​ಸಿ ಕೋಡ್​ ಬಳಸಿ ನಡೆಸಲಾಗುವ ವ್ಯವಹಾರಗಳು ತಿರಸ್ಕೃತವಾಗಲಿದೆ. ಹೀಗಾಗಿ ದಯಮಾಡಿ ಹೊಸ ಐಎಫ್​ಎಸ್​ಸಿ ಕೋಡ್​ನ್ನು ಡಿ ರಿಜಿಸ್ಟರ್​ ಮಾಡಿ ಎಂದು ಕೋರಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ 2019ರಲ್ಲಿ ಬರೋಬ್ಬರಿ 10 ಸಾರ್ವಜನಿಕ ಬ್ಯಾಂಕ್​ಗಳನ್ನ ವಿಲೀನಗೊಳಿಸಿದ್ದರು. ಈ ಘೋಷಣೆಯ ಭಾಗವಾಗಿ ಏಪ್ರಿಲ್ 1ನೇ ತಾರೀಖಿನಿಂದ ಈ ಬ್ಯಾಂಕ್​ಗಳ ಐಎಫ್​ಎಸ್​ಸಿ ಕೋಡ್​ಗಳು ಬದಲಾಗಿದೆ. ಹೀಗಾಗಿ ಹಳೆಯ ಐಎಫ್​ಎಸ್​ಸಿ ಕೋಡ್​ಗಳನ್ನ ಬಳಕೆ ಮಾಡಿದವರ ವ್ಯವಹಾರಗಳು ನಿಷ್ಕ್ರಿಯಗೊಳ್ಳುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...