alex Certify ಶಿವಮೊಗ್ಗ: ಅಡಿಕೆ ಬೆಳೆಗಾರರಿಗೆ ಬಂಪರ್, 60 ಸಾವಿರ ರೂ. ದಾಟಿದ ದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗ: ಅಡಿಕೆ ಬೆಳೆಗಾರರಿಗೆ ಬಂಪರ್, 60 ಸಾವಿರ ರೂ. ದಾಟಿದ ದರ

ಶಿವಮೊಗ್ಗ: ಅಡಿಕೆ ದರ 60 ಸಾವಿರ ರೂಪಾಯಿ ದಾಟಿದೆ. ಕಳೆದ 10 ದಿನದ ಅವಧಿಯಲ್ಲಿ 10 ಸಾವಿರ ರೂಪಾಯಿಯಷ್ಟು ಜಾಸ್ತಿಯಾಗಿದೆ.

ಸೋಮವಾರ ಮಾರುಕಟ್ಟೆಯಲ್ಲಿ ರಾಶಿ ಇಡಿ ಅಡಿಕೆ 60,000 ರೂಪಾಯಿ ದಾಟಿದೆ. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಇಡಿ ದರ ಕನಿಷ್ಠ 55,099 ರೂ.ನಿಂದ ಗರಿಷ್ಠ 60,509 ರೂ.ವರೆಗೆ ಮಾರಾಟವಾಗಿದೆ. ಬೆಟ್ಟೆ ದರ 39,305 ರೂ.ವರೆಗೂ ಮಾರಾಟವಾಗಿದೆ.

ಕಳೆದ ವರ್ಷ ಅಡಿಕೆ ದರ 42 ಸಾವಿರ ರೂ.ವರೆಗೂ ಇತ್ತು. ವಿದೇಶಿ ಅಡಿಕೆ ಮೇಲೆ ನಿರ್ಬಂಧ ಹೇರಲಾಗಿದೆ. ಅಲ್ಲದೇ ಈ ಬಾರಿ ಅಡಿಕೆ ಫಸಲು ಕಡಿಮೆಯಾಗಿದೆ. ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಅಡಿಕೆ ಬರುತ್ತಿರುವುದರಿಂದ ಬೆಲೆ ಏರಿದೆ. ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಮಾರುಕಟ್ಟೆಗೆ ಬಂದರೆ, ದರ ಇಳಿಯಬಹುದು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...