alex Certify ಕಾರ್ ಮಾಲೀಕರಿಗೆ ಮುಖ್ಯ ಮಾಹಿತಿ: ಎಲ್ಲಾ ಕಾರ್ ಗಳಿಗೆ ಏರ್ ಬ್ಯಾಗ್ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ ಮಾಲೀಕರಿಗೆ ಮುಖ್ಯ ಮಾಹಿತಿ: ಎಲ್ಲಾ ಕಾರ್ ಗಳಿಗೆ ಏರ್ ಬ್ಯಾಗ್ ಕಡ್ಡಾಯ

ನವದೆಹಲಿ: ಕಾರ್ ಗಳಲ್ಲಿ ಚಾಲಕನ ಪಕ್ಕದ ಸೀಟುಗಳಿಗೂ ಏರ್ ಬ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಕಡಿಮೆ ಬೆಲೆಯ ಕಾರುಗಳು ನಿಯಮ ಅನ್ವಯವಾಗಲಿದೆ.

ಈ ನಿಟ್ಟಿನಲ್ಲಿ ನಿಯಮ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಐಷಾರಾಮಿ, ದುಬಾರಿ ಕಾರುಗಳು ಮಾತ್ರವಲ್ಲದೆ ಕಡಿಮೆ ಬೆಲೆಯ ಕಾರ್ ಗಳಲ್ಲಿಯೂ ಚಾಲಕರ ಪಕ್ಕದ ಪ್ರಯಾಣಿಕರ ಸೀಟಿಗೆ ಕಡ್ಡಾಯವಾಗಿ ಏರ್ ಬ್ಯಾಗ್ ಅಳವಡಿಸಬೇಕಿದೆ.

ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ವಾಹನ ಉದ್ಯಮ ಗುಣಮಟ್ಟ ಸಮಿತಿಗೆ ಈ ಕುರಿತಾಗಿ ಸೂಚಿಸಲಾಗಿದೆ. 2019 ರ ಜುಲೈ 1 ರಿಂದಲೇ ಚಾಲಕರು ಕುಳಿತುಕೊಳ್ಳುವ ಸೀಟ್ ನಲ್ಲಿ ಏರ್ ಬ್ಯಾಗ್ ಕಡ್ಡಾಯ ಮಾಡಲಾಗಿದೆ. ಡ್ರೈವರ್ ಪಕ್ಕದ ಸೀಟಿನಲ್ಲಿ ಕುಳಿತವರು ಅಪಘಾತದ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಳ್ಳುತ್ತಾರೆ. ಅನೇಕ ಸಂದರ್ಭದಲ್ಲಿ ಜೀವಹಾನಿಯಾಗುತ್ತದೆ. ಈ ಕಾರಣಕ್ಕೆ ಡ್ರೈವರ್ ಪಕ್ಕದ ಸೀಟಿಗೆ ಕೂಡ ಏರ್ ಬ್ಯಾಗ್ ಕಡ್ಡಾಯಗೊಳಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...