alex Certify ಅನಿಲ್​ ಅಂಬಾನಿ ಕಂಪನಿಗಳ ಬ್ಯಾಂಕ್‌ ಖಾತೆ ಕುರಿತು ನ್ಯಾಯಾಲಯದ ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಿಲ್​ ಅಂಬಾನಿ ಕಂಪನಿಗಳ ಬ್ಯಾಂಕ್‌ ಖಾತೆ ಕುರಿತು ನ್ಯಾಯಾಲಯದ ಮಹತ್ವದ ಸೂಚನೆ

ಅನಿಲ್​ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಷನ್​, ರಿಲಯನ್ಸ್ ಟೆಲಿಕಾಂ ಹಾಗೂ ರಿಲಯನ್ಸ್ ಇನ್ಫ್ರಾಟೆಲ್​ನ ಬ್ಯಾಂಕ್​ ಖಾತೆಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾಗೆ ದೆಹಲಿ ಹೈಕೋರ್ಟ್​ ಸೂಚನೆ ನೀಡಿದೆ.

ರಿಲಯನ್ಸ್ ಕಮ್ಯೂನಿಕೇಷನ್​​ನ ಮಾಜಿ ನಿರ್ದೇಶಕ ಪುನೀತ್​ ಗರ್ಗ್​ ಆರ್​ಬಿಐ ಸುತ್ತೋಲೆ ಗ್ರಾಹಕರಿಗೆ ಮಾಡುತ್ತಿರುವ ವಂಚನೆ ಎಂದು ಆರೋಪಿಸಿ ಹೈಕೋರ್ಟ್​ ಮೆಟ್ಟಿಲೇರಿದ್ದರು.

ರಿಲಯನ್ಸ್​ ಕಮ್ಯೂನಿಕೇಷನ್​ ಪರ ಹಾಜರಾದ ಹಿರಿಯ ವಕೀಲ ಜೆ.ಜೆ. ಭಟ್​, ಈ ಸುತ್ತೋಲೆ ನೈಸರ್ಗಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ ಎಂದು ವಾದಿಸಿದ್ದರು. ವಂಚನೆಯ ಖಾತೆಗಳು ಎಂದು ಬ್ಯಾಂಕ್​ಗಳು ಘೋಷಿಸಿರುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ 2016ರ ಸುತ್ತೋಲೆಯನ್ನು ಪ್ರಶ್ನಿಸಿ ರಿಲಯನ್ಸ್​ನ ಮೂರು ಕಂಪನಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...