alex Certify ವಾಟ್ಸಾಪ್ ಬಳಕೆದಾರರೇ ಗಮನಿಸಿ: ಹೊಸ ವರ್ಷದಲ್ಲಿ ಆಗಲಿದೆ ಈ ಮಹತ್ವದ ಬದಲಾವಣೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಬಳಕೆದಾರರೇ ಗಮನಿಸಿ: ಹೊಸ ವರ್ಷದಲ್ಲಿ ಆಗಲಿದೆ ಈ ಮಹತ್ವದ ಬದಲಾವಣೆ..!

ಹೊಸ ವರ್ಷದ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೊಸ ವರ್ಷದ ಸಂಭ್ರಮವನ್ನ ಇನ್ನಷ್ಟು ಹೆಚ್ಚಿಸಲು ಈಗಾಗಲೇ ಅನೇಕ ಕಂಪನಿಗಳು ಜನರಿಗೆ ಒಂದಿಲ್ಲೊಂದು ಆಫರ್​​ಗಳನ್ನ ನೀಡುತ್ತಲೇ ಇದೆ. ಇದೀಗ ಈ ಸಾಲಿಗೆ ವಾಟ್ಸಾಪ್​ ಕೂಡ ಸೇರಿದ್ದು ಮುಂದಿನ ವರ್ಷದ ಆರಂಭದಲ್ಲಿ ಗ್ರಾಹಕರಿಗೆ ಮತ್ತಷ್ಟು ಸೌಲಭ್ಯಗಳನ್ನ ನೀಡೋಕೆ ಪ್ಲಾನ್​ ಮಾಡಿದೆ.

ಮುಂದಿನ ವರ್ಷದಲ್ಲಿ ವಾಟ್ಸಾಪ್​ ಮೆಸೆಂಜರ್​​ನ ಹೊಸ ನಿಯಮ ಹಾಗೂ ಗೌಪ್ಯತೆ ನೀತಿಯನ್ನ ಬಳಕೆದಾರರು ಒಪ್ಪಿಕೊಳ್ಳಬೇಕಾಗುತ್ತೆ. ಫೇಸ್​ಬುಕ್​ ಒಡೆತನದ ವಾಟ್ಸಾಪ್​ ಸಂಸ್ಥೆ ಫೆಬ್ರವರಿ 8ರಿಂದ ತಮ್ಮ ಸೇವಾ ನಿಯಮಗಳಲ್ಲಿ ಕೆಲ ಮಹತ್ವಪೂರ್ಣ ಬದಲಾವಣೆಗಳನ್ನ ಮಾಡಲಿದೆ. ವಾಟ್ಸಾಪ್​ನ ಹೊಸ ಗೌಪ್ಯತಾ ನೀತಿ ಬಳಕೆದಾರರಿಗೆ ಇಷ್ಟವಾಗದೇ ಇದ್ದಲ್ಲಿ ಬಳಕೆದಾರರು ಸುಲಭವಾಗಿ ತಮ್ಮ ಖಾತೆಯನ್ನ ಡಿಲೀಟ್​ ಮಾಡಬಹುದಾಗಿದೆ.

ಇನ್ನು ಡೆಸ್ಕ್​ಟಾಪ್​​ನಲ್ಲಿ ವಾಟ್ಸಾಪ್​​ ಬಳಕೆ ಮಾಡುವವರಿಗೆ ಆಡಿಯೋ ಹಾಗೂ ವಿಡಿಯೋ ಕಾಲ್​ ಮಾಡುವ ಸೌಲಭ್ಯ ನೀಡಲು ವಾಟ್ಸಾಪ್​ ಸಿದ್ಧತೆ ನಡೆಸುತ್ತಿದೆ. ವಾಟ್ಸಾಪ್​ ವೆಬ್​​ ಬಳಕೆ ಮಾಡುವವರು ಸಿಸ್ಟಮ್​ ಹಾಗೂ ಲ್ಯಾಪ್​ಟಾಪ್​ಗಳಲ್ಲಿ ಚಾಟ್​ ಮಾಡಬಹುದಾಗಿತ್ತು. ಆದರೆ ಆಡಿಯೋ ಹಾಗೂ ವಿಡಿಯೋ ಕರೆಗೆ ಅವಕಾಶ ಇರುತ್ತಿರಲಿಲ್ಲ. ಆದರೆ ಮುಂದಿನ ವರ್ಷದಿಂದ ವಾಟ್ಸಾಪ್​ ಈ ಸೌಲಭ್ಯವನ್ನ ಬಳಕೆದಾರರಿಗೆ ನೀಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...