alex Certify ವ್ಯಾಪಾರಸ್ಥರಿಗೆ ಖುಷಿ ಸುದ್ದಿ: ರಫ್ತಿಗೆ ನೆರವಾಗಲಿದೆ ಅಂಚೆ ಇಲಾಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಪಾರಸ್ಥರಿಗೆ ಖುಷಿ ಸುದ್ದಿ: ರಫ್ತಿಗೆ ನೆರವಾಗಲಿದೆ ಅಂಚೆ ಇಲಾಖೆ

ಅಂಚೆ ಕಚೇರಿ ಮೂಲಕ ರಫ್ತು ಉತ್ತೇಜನಕ್ಕೆ ಮಹತ್ವದ ಹೆಜ್ಜೆಯಿಡಲಾಗಿದೆ. ಭಾರತ-ಅಮೆರಿಕಾ ಕಸ್ಟಮ್ಸ್ ಡೇಟಾದ ಎಲೆಕ್ಟ್ರಾನಿಕ್ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತೀಯ ಅಂಚೆ ಇಲಾಖೆ ಮತ್ತು ಯುನೈಟೆಡ್ ಸ್ಟೇಟ್ಸ್ ಅಂಚೆ ಸೇವೆಯ ಅಧಿಕಾರಿಗಳು ಸಹಿ ಹಾಕಿದ್ದಾರೆ. ಈ ಒಪ್ಪಂದವು ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅಂಚೆ ಸೇವೆಗಳ ಕಾರ್ಯಕ್ಷಮತೆಯನ್ನು ಸುಧಾರಿಸಲಿದೆ.ವಸ್ತುಗಳು ಗಮ್ಯಸ್ಥಾನ ತಲುಪುವ ಮೊದಲೇ ಎಲೆಕ್ಟ್ರಾನಿಕ್ ಡೇಟಾ ಮಾಹಿತಿ ಸಿಗಲಿದೆ.

ಭಾರತ-ಅಮೆರಿಕಾ ಮಧ್ಯೆ ಆಮದು ಮತ್ತು ರಫ್ತು ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಅಮೆರಿಕವು ಭಾರತದ ರಫ್ತು ತಾಣವಾಗಿದೆ. ಇದರಲ್ಲಿ ಶೇಕಡಾ 17ರಷ್ಟನ್ನು ಭಾರತದ ಅಂಚೆ ಇಲಾಖೆಯ ಮೂಲಕ ಕಳುಹಿಸಲಾಗುತ್ತದೆ. 2019 ರಲ್ಲಿ ಇಂಡಿಯಾ ಪೋಸ್ಟ್ ನಿಂದ ಪಡೆದ ಶೇಕಡಾ 60ರಷ್ಟು ಪಾರ್ಸೆಲ್‌ಗಳು ಯುಎಸ್‌ನಿಂದ ಬಂದವಾಗಿದ್ದವು. ಒಪ್ಪಂದದ ಪ್ರಕಾರ, ಎಲೆಕ್ಟ್ರಾನಿಕ್ ಮುಂಗಡ ದತ್ತಾಂಶಗಳ ವಿನಿಮಯ ಪರಸ್ಪರ ವ್ಯಾಪಾರವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಭಾರತ ಮತ್ತು ಅಮೆರಿಕದ ಅಂಚೆ ಇಲಾಖೆ ನಡುವಿನ ಈ ಒಪ್ಪಂದವು ಸಣ್ಣ ರಫ್ತುದಾರರಿಗೆ ಪ್ರಯೋಜನವನ್ನು ನೀಡಲಿದೆ. ಈಗ ಸಣ್ಣ ರಫ್ತುದಾರರು ಭಾರತೀಯ ಅಂಚೆ ಇಲಾಖೆಯ ಸಹಾಯದಿಂದ ತಮ್ಮ ಸರಕುಗಳನ್ನು ಸುಲಭವಾಗಿ ಅಮೆರಿಕಕ್ಕೆ ರಫ್ತು ಮಾಡಲು ಸಾಧ್ಯವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...