alex Certify ವೈರಲ್ ಆಗಿದೆ ಕರೋನಾ ವಾರಿಯರ್ಸ್ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಆಗಿದೆ ಕರೋನಾ ವಾರಿಯರ್ಸ್ ಫೋಟೋ

Viral Pic Shows Cops Sleeping On Ground, Twitter Thanks ...ಅರುಣಾಚಲ ಪ್ರದೇಶ: ಮಾರಕ ಮಾರಿ ಕರೊನಾ‌ ಓಡಿಸಲು ದೇಶದ ಜನರೆಲ್ಲ‌ ಮನೆಯಲ್ಲಿ ಕುಳಿತರೆ ಪೊಲೀಸರು ರಸ್ತೆಯಲ್ಲಿ ನಿಂತು ಹೋರಾಡುತ್ತಿದ್ದಾರೆ.‌ ಸುಡು ಬಿಸಿಲಲ್ಲಿ ಊಟ, ತಿಂಡಿ, ಹನಿ ನೀರು ಇಲ್ಲದೇ ನಿಂತು ಜನರು‌ ಓಡಾಡದಂತೆ ತಡೆಯುತ್ತಿದ್ದಾರೆ.

ಕರೋನಾ ವಾರಿಯರ್ಸ್ ಗ್ಯಾರೇಜ್ ಒಂದರ ನೆಲದ ಮೇಲೆ ಮಲಗಿ ನಿದ್ರಿಸುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ತಮ್ಮ ರಕ್ಷಣಾ ಕವಚವನ್ನೇ ಹಾಸಿಗೆಯಾಗಿಸಿಕೊಂಡು ಹೆಲ್ಮೆಟ್, ಲಾಠಿಗಳನ್ನು ಬದಿಗಿಟ್ಟು ಒರಗಿದ ಚಿತ್ರ ಇದಾಗಿದೆ.

ಅರುಣಾಚಲಪ್ರದೇಶ ಡಿಐಜಿಪಿ ಮಧುರ ವರ್ಮಾ ಈ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. “8 ತಾಸು‌ ನಿದ್ರೆ ಮಾಡಲು ಇದು ಸುಖಾಸನವಲ್ಲ” ಎಂದು ಹೇಳಿದ್ದಾರೆ. ಪೋಟೋ 5 ಸಾವಿರ ಜನ ರಿಟ್ವೀಟ್ ಮಾಡಿದ್ದಾರೆ. 29 ಸಾವಿರ ಲೈಕ್ ಗಳು ಬಂದಿವೆ.

— Madhur Verma (@IPSMadhurVerma) April 24, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...