alex Certify ಲ್ಯಾಪ್ ಟಾಪ್, ಮೊಬೈಲ್ ಪ್ರಿಯರಿಗೆ ʼಗುಡ್ ನ್ಯೂಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲ್ಯಾಪ್ ಟಾಪ್, ಮೊಬೈಲ್ ಪ್ರಿಯರಿಗೆ ʼಗುಡ್ ನ್ಯೂಸ್ʼ

lockdown: Amazon, Flipkart will deliver smartphones, laptops and ...

ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಭಾರತದಲ್ಲಿ ಮೂರನೇ ಬಾರಿ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಮೇ 17ರವರೆಗೆ ಲಾಕ್ ಡೌನ್ ಇರಲಿದೆ. ಆದ್ರೆ ಮೂರನೇ ಬಾರಿ ಲಾಕ್ ಡೌನ್ ನಲ್ಲಿ ಸಾಕಷ್ಟು ಸಡಿಲಿಕೆ ಮಾಡಲಾಗಿದೆ. ಮದ್ಯದಂಗಡಿ ಸೇರಿದಂತೆ ಅನೇಕ ಅಂಗಡಿಗಳ ಬಾಗಿಲು ತೆರೆಯಲು ಅವಕಾಶ ನೀಡಲಾಗಿದೆ.

ಮೊಬೈಲ್, ಲ್ಯಾಪ್ ಟಾಪ್ ಪ್ರಿಯರಿಗೆ ಖುಷಿ ಸುದ್ದಿಯೊಂದಿದೆ. ಇಂದಿನಿಂದ ಜನರು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಬಹುದು. ಇ-ಕಾಮರ್ಸ್ ಕಂಪನಿಯಲ್ಲಿ ಸ್ಮಾರ್ಟ್ಫೋನ್, ಲ್ಯಾಪ್ ಟಾಪ್  ಸಿಗಲಿದೆ. ಇದಕ್ಕೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ.

ಗೃಹ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಕೊರೊನಾ ವೈರಸ್ ಕಡಿಮೆಯಿರುವ ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿ ಮಾತ್ರ ಇ-ಕಾಮರ್ಸ್ ಕಂಪನಿಗಳಿಗೆ ಅನಿವಾರ್ಯವಲ್ಲದ ವಸ್ತುಗಳನ್ನು ತಲುಪಿಸಲು ಅವಕಾಶ ನೀಡಲಾಗ್ತಿದೆ. ಈ ವಲಯದ ಜನರು ಲ್ಯಾಪ್ ಟಾಪ್, ಸ್ಮಾರ್ಟ್ಫೊನ್ ಖರೀದಿಸಬಹುದು. ಅಲ್ಲದೆ ಎಲ್ಲಾ ಪ್ರದೇಶಗಳಲ್ಲಿ ಅಂಚೆ ಮತ್ತು ಕೊರಿಯರ್ ಸೇವೆಗಳನ್ನು ಪ್ರಾರಂಭಿಸಲು ಸರ್ಕಾರ ಆದೇಶಿಸಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...