alex Certify ಜಿಯೋ ಲಿಂಕ್ ನಲ್ಲಿ ಗ್ರಾಹಕರಿಗೆ ಸಿಗ್ತಿದೆ ‘ಬಂಪರ್’ ಡೇಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಲಿಂಕ್ ನಲ್ಲಿ ಗ್ರಾಹಕರಿಗೆ ಸಿಗ್ತಿದೆ ‘ಬಂಪರ್’ ಡೇಟಾ

नए 'JioLink' प्लान्स में मिल रहा है 1076GB तक डेटा, देखें डिटेल

ರಿಲಾಯನ್ಸ್ ಜಿಯೋ ತನ್ನ ಜಿಯೋಲಿಂಕ್ ಗ್ರಾಹಕರಿಗಾಗಿ ಹೊಸ ಯೋಜನೆ ಪರಿಚಯಿಸಿದೆ. ಲಾಕ್ ಡೌನ್ ವೇಳೆ ಗ್ರಾಹಕರು ಹೆಚ್ಚು ಲಾಭ ಪಡೆಯಲಿ ಎನ್ನುವ ಕಾರಣಕ್ಕೆ ಜಿಯೋ ಹೊಸ ಯೋಜನೆಗಳನ್ನು ಶುರು ಮಾಡಿದೆ. ಜಿಯೋಲಿಂಕ್ ಗೆ ಶುರು ಮಾಡಿರುವ ಯೋಜನೆ ಬೆಲೆ 699 ರೂಪಾಯಿ. ಈ ಯೋಜನೆಗಳು 196 ದಿನಗಳ ಮಾನ್ಯತೆಯೊಂದಿಗೆ 1076ಜಿಬಿ ಡೇಟಾ ಲಭ್ಯವಿದೆ.

ಜಿಯೋ ಲಿಂಕ್ ಒಂದು 4 ಜಿ ಎಲ್ ಟಿಇ ಮೋಡೆಮ್. ಇದು ಜಿಯೋಫೈ ಹಾಟ್‌ಸ್ಪಾಟ್ ಸಾಧನಕ್ಕಿಂತ ಭಿನ್ನವಾಗಿದೆ. ಜಿಯೋ 4 ಜಿ ಸೇವೆಯನ್ನು ವಾಣಿಜ್ಯವಾಗಿ ಪ್ರಾರಂಭಿಸುವ ಮೊದಲು ರಿಲಯನ್ಸ್ ಇಂಡಸ್ಟ್ರೀಸ್ ಉದ್ಯೋಗಿಗಳಿಗೆ ಜಿಯೋಲಿಂಕ್ ನೀಡಿತ್ತು. ಈಗ ಜಿಯೋ 4ಜಿ ಸೇವೆ ಲಭ್ಯವಾಗಿದೆ. ಈಗ ಮೋಡೆಮ್ ಅಗತ್ಯವಿಲ್ಲ. ಈಗಾಗಲೇ ಮೊಡೆಮ್ ಇರುವವರು ಇದನ್ನು ರಿಚಾರ್ಜ್ ಮಾಡಬಹುದು.

ಕಂಪನಿಯು ಈಗ ಜಿಯೋಲಿಂಕ್‌ಗಾಗಿ ಮೂರು ಯೋಜನೆಗಳನ್ನು ಹೊಂದಿದೆ. ಈ ಯೋಜನೆಗಳ ಆರಂಭಿಕ ಬೆಲೆ 699 ರೂಪಾಯಿಗಳು. ಇದು 1 ತಿಂಗಳ ಮಾನ್ಯತೆಯನ್ನು ಹೊಂದಿದ್ದು, ಪ್ರತಿ ದಿನ 5ಜಿಬಿ ಡೇಟಾ ಲಭ್ಯವಿದೆ. 2,099 ರೂಪಾಯಿ ಯೋಜನೆಯು ಮೂರು ತಿಂಗಳ ಮಾನ್ಯತೆಯನ್ನು ನೀಡುತ್ತದೆ. ಇದು ಕೂಡ ಪ್ರತಿ ದಿನ 5ಜಿಬಿ ಡೇಟಾ ನೀಡುತ್ತದೆ. 4,199 ರೂಪಾಯಿ ಯೋಜನೆಯು 6 ತಿಂಗಳ ಮಾನ್ಯತೆಯೊಂದಿಗೆ ಗ್ರಾಹಕರಿಗೆ ಲಭ್ಯವಿದೆ. ಇದ್ರಲ್ಲಿ ಕೂಡ ಪ್ರತಿ ದಿನ ಗ್ರಾಹಕರಿಗೆ 5 ಜಿಬಿ ಡೇಟಾ ಗ್ರಾಹಕರಿಗೆ ಲಭ್ಯವಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...