alex Certify ಕೊರೊನಾ ಸೋಂಕಿತರಿಗೆ ನೆರವಾಗಲಿದೆ SBI ಈ ಪಾಲಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿತರಿಗೆ ನೆರವಾಗಲಿದೆ SBI ಈ ಪಾಲಿಸಿ

ಕೊರೊನಾ ವೈರಸ್ ಸಾಂಕ್ರಾಮಿಕ ಚಿಕಿತ್ಸೆ ಸಾಕಷ್ಟು ದುಬಾರಿಯಾಗಿದೆ. ಅನೇಕ ರಾಜ್ಯಗಳು ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡ್ತಿದೆ. ಆದ್ರೆ ಖಾಸಗಿ ಆಸ್ಪತ್ರೆಗಳಲ್ಲಿ ಇದ್ರ ಚಿಕಿತ್ಸೆ  ತುಂಬಾ ದುಬಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ  ಸಾಂಕ್ರಾಮಿಕ ಚಿಕಿತ್ಸೆಯ ವೆಚ್ಚಗಳನ್ನು ಭರಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಇನ್ಶುರೆನ್ಸ್ ಕಂಪನಿ ಆರೋಗ್ಯ ವಿಮಾ ಪಾಲಿಸಿಯನ್ನು ಪ್ರಾರಂಭಿಸಿದೆ. ಈ ವಿಮಾ ಪಾಲಿಸಿಯಡಿ ಜನರಿಗೆ ಒಂದು ಲಕ್ಷ ರೂಪಾಯಿಗಳಿಂದ ಐದು ಲಕ್ಷ ರೂಪಾಯಿಗಳವರೆಗೆ ವಿಮೆ ಸಿಗಲಿದೆ.

ಕಂಪನಿಯು ಈ ಪಾಲಿಸಿಯನ್ನು ಆರೋಗ್ಯ ಸಂಜೀವನಿ ಆರೋಗ್ಯ ವಿಮಾ ಪಾಲಿಸಿ ಎಂದು ಹೆಸರಿಸಿದೆ. ಇದನ್ನು ಪ್ರಾರಂಭಿಸಿದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪುಶನ್ ಮಹಾಪಾತ್ರ ಅವರು, ವಿಮಾ ನಿಯಂತ್ರಣ ಪ್ರಾಧಿಕಾರದ  ನಿಯಮಗಳ ಅಡಿಯಲ್ಲಿ ಪಾಲಿಸಿಯನ್ನು ಪ್ರಾರಂಭಿಸಲಾಗಿದೆ. ದೊಡ್ಡ, ಸಣ್ಣ ಪಟ್ಟಣಗಳು ​​ಮತ್ತು ಹಳ್ಳಿಗಳ ಜನರನ್ನು ಇದು ಆಕರ್ಷಿಸಲಿದೆ ಎಂದಿದ್ದಾರೆ.

ಎಸ್‌ಬಿಐ ಈಗಾಗಲೇ ಆರೋಗ್ಯ ಪ್ರೀಮಿಯರ್, ಆರೋಗ್ಯ ಪ್ಲಸ್ ಮತ್ತು ಆರೋಗ್ಯ ಟಾಪ್ ಅಪ್ ಎಂಬ ಆರೋಗ್ಯ ವಿಮಾ ಪಾಲಿಸಿಯನ್ನು ನಡೆಸುತ್ತಿದೆ.ಇದು ಗ್ರಾಹಕರಿಗೆ ನೆರವಾಗಲಿದೆ ಎಂಬುದು ಕಂಪನಿ ಆಶಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...