alex Certify ಈ ವ್ಯವಹಾರದಲ್ಲಿ ಪ್ರತಿ ತಿಂಗಳು ಗಳಿಸಿ 50 ಸಾವಿರ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವ್ಯವಹಾರದಲ್ಲಿ ಪ್ರತಿ ತಿಂಗಳು ಗಳಿಸಿ 50 ಸಾವಿರ ರೂ.

ಕೊರೊನಾ ವೈರಸ್ ಸೋಂಕಿನ ಸಮಯದಲ್ಲಿ ಸುರಕ್ಷಿತವಾಗಿರುವ ಕ್ಷೇತ್ರವೆಂದ್ರೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳು. ಇದನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಕೂಡ ಹೇಳಿದ್ದಾರೆ. ಕೃಷಿಗೆ ಭೂಮಿ ಬೇಕು. ಆದ್ರೆ ಎಲ್ಲರ ಬಳಿಯೂ ಕೃಷಿ ಭೂಮಿ ಇರುವುದಿಲ್ಲ. ಅಂತವರು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ ಉದ್ಯಮವನ್ನು ಪ್ರಾರಂಭಿಸಬಹುದು.

ಭಾರತದಲ್ಲಿ  ಬೇಳೆಕಾಳಿಗೆ ಹೆಚ್ಚಿನ ಬೇಡಿಕೆಯಿದೆ.ಇದರ ಬೆಲೆಗಳು ಸಹ ನಿರಂತರವಾಗಿ ಹೆಚ್ಚುತ್ತಿವೆ.ಇದಕ್ಕೆ ಸಂಬಂಧಿಸಿದ ವ್ಯವಹಾರ ಶುರು ಮಾಡಿ ಹಣ ಗಳಿಸಬಹುದು. ದ್ವಿದಳ ಧಾನ್ಯಗಳ ಗಿರಣಿ ಶುರು ಮಾಡಬಹುದು.

ದ್ವಿದಳ ಧಾನ್ಯಗಳ ಗಿರಣಿಯ ವ್ಯವಹಾರವನ್ನು ಪ್ರಾರಂಭಿಸಲು ಕನಿಷ್ಠ 25 ರಿಂದ 30 ಚದರ ಅಡಿ ಜಾಗದ ಅಗತ್ಯವಿದೆ.‌ ಸ್ವಂತ ಸ್ಥಳವಿದ್ದರೆ ಬಾಡಿಗೆ ನೀಡುವ ಅಗತ್ಯವಿರುವುದಿಲ್ಲ. ಈ ವ್ಯವಹಾರಕ್ಕೆ ಸುಮಾರು 4 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು. 8 ಎಚ್‌ಪಿ ಯಂತ್ರವನ್ನು ಬಳಸಿದರೆ ನೀವು 8 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.

ಅಂಗಡಿ ನಡೆಸಲು ಮತ್ತು ವ್ಯಾಪಾರ ಮಾಡಲು ನಿಮಗೆ ಜಿಎಸ್ಟಿ ಸಂಖ್ಯೆ ಬೇಕಾಗುತ್ತದೆ. ಜಿಎಸ್ಟಿ ಪೋರ್ಟಲ್ ನಲ್ಲಿ ನೋಂದಾಯಿಸಿದ ನಂತರ ಜಿಎಸ್ಟಿ ಸಂಖ್ಯೆ ಸಿಗುತ್ತದೆ. ತೆರೆದ ಮಸೂರ ಅಥವಾ ಪ್ಲಾಸ್ಟಿಕ್ ಪ್ಯಾಕೇಜ್ ಮಾಡಿದ ಬೇಳೆಗೆ ಜಿಎಸ್ಟಿ ಇರುವುದಿಲ್ಲ. ಸ್ವಂತ ಬ್ರಾಂಡ್ ತಯಾರಿಸುವ ಮೂಲಕ ನೀವು ದ್ವಿದಳ ಧಾನ್ಯಗಳನ್ನು ಮಾರಾಟ ಮಾಡಿದರೆ, ನಿಮಗೆ ಜಿಎಸ್ಟಿ ಅಗತ್ಯವಿದೆ. ಬ್ರಾಂಡೆಡ್ ದ್ವಿದಳ ಧಾನ್ಯಗಳನ್ನು ಮಾರಾಟ ಮಾಡುವಾಗ ಶೇಕಡಾ 5 ಜಿಎಸ್ಟಿ ವಿಧಿಸಬೇಕು.

ಬ್ರ್ಯಾಂಡಿಂಗ್  ಉತ್ಪನ್ನಕ್ಕೆ ಆಹಾರ ಸಚಿವಾಲಯದಿಂದ ಅನುಮತಿ ಪಡೆಯಬೇಕು. ಪಾನ್ ಕಾರ್ಡ್ ಮತ್ತು ಕರೆಂಟ್ ಅಕೌಂಟ್ ಇದ್ದರೆ ಮಾತ್ರ ನಿಮಗೆ ಸೌಲಭ್ಯ ಸಿಗುತ್ತದೆ. ಬಾಡಿಗೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಬಾಡಿಗೆ ಒಪ್ಪಂದದ ಅಗತ್ಯವಿರುತ್ತದೆ. ಗಿರಣಿಯನ್ನು ಪ್ರಾರಂಭಿಸಲು ಕಂಪನಿಯನ್ನು ನೋಂದಾಯಿಸಿಕೊಳ್ಳಬೇಕು. ಪರವಾನಗಿ ಪಡೆಯಬೇಕು.

ದ್ವಿದಳ ಧಾನ್ಯಗಳ ವ್ಯವಹಾರವನ್ನು ಪ್ರಾರಂಭಿಸಲು 5 ರಿಂದ 6 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು. 5-6 ಲಕ್ಷ ರೂ.ಗಳ ಹೂಡಿಕೆಯಲ್ಲಿ ಪ್ರತಿ ತಿಂಗಳು 50 ಸಾವಿರ ರೂಪಾಯಿಗಳವರೆಗೆ ಸುಲಭವಾಗಿ ಗಳಿಸಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...