alex Certify ʼಉದ್ಯೋಗʼದ ನಿರೀಕ್ಷೆಯಲ್ಲಿದ್ದವರಿಗೆ ಹಬ್ಬಕ್ಕೂ ಮುನ್ನವೇ ಭರ್ಜರಿ ಬಂಪರ್‌ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಉದ್ಯೋಗʼದ ನಿರೀಕ್ಷೆಯಲ್ಲಿದ್ದವರಿಗೆ ಹಬ್ಬಕ್ಕೂ ಮುನ್ನವೇ ಭರ್ಜರಿ ಬಂಪರ್‌ ಸುದ್ದಿ

ಇ-ಕಾಮರ್ಸ್ ಕಂಪನಿಗಳು ತಮ್ಮ ಮಾರಾಟವನ್ನು ಹೆಚ್ಚಿಸಲು ಹಬ್ಬದ ಋತುವಿನಲ್ಲಿ ಬಂಪರ್ ನೇಮಕಾತಿ ಮಾಡ್ತಿವೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ಅನೇಕ ಇ-ಕಾಮರ್ಸ್ ಕಂಪನಿಗಳು ದೇಶದ ಸುಮಾರು 3 ಲಕ್ಷ ಜನರಿಗೆ ಉದ್ಯೋಗ ನೀಡಲಿವೆ.

ವರದಿಯ ಪ್ರಕಾರ, ಹಬ್ಬದ ಋತುವಿನಲ್ಲಿ ಹೆಚ್ಚಿನ ನೇಮಕಾತಿಗಳನ್ನು ತಾತ್ಕಾಲಿಕವಾಗಿ ಇ-ಕಾಮರ್ಸ್ ಕಂಪನಿಗಳು ಮಾಡುತ್ತವೆ. ಇ-ಕಾಮರ್ಸ್ ಕಂಪನಿಗಳಿಂದ ಸರಕುಗಳನ್ನು ತಲುಪಿಸುವ ಲಾಜಿಸ್ಟಿಕ್ಸ್ ಕಂಪನಿ ಇಕಾಮ್ ಎಕ್ಸ್ ಪ್ರೆಸ್ 30,000 ಹೊಸ ಉದ್ಯೋಗಗಳ ನೇಮಕ ಮಾಡಲಿದೆ.

ಅಕ್ಟೋಬರ್ ಮೊದಲ ವಾರದಲ್ಲಿ ನೇಮಕಾತಿ ನಡೆಯುವ ಸಾಧ್ಯತೆಯಿದೆ. ಹಬ್ಬ ಮುಗಿದ ನಂತ್ರವೂ ಶೇಕಡಾ 20ರಷ್ಟು ಉದ್ಯೋಗಿಗಳನ್ನು ಇ-ಕಾಮರ್ಸ್ ಕಂಪನಿಗಳು ಕೆಲಸದಿಂದ ತೆಗೆಯುವುದಿಲ್ಲವಂತೆ. ಇತ್ತೀಚಿನ ದಿನಗಳಲ್ಲಿ ಜನರು ಆನ್ಲೈನ್ ಖರೀದಿ ಶುರು ಮಾಡಿದ್ದಾರೆ. ಇದೇ ಕಾರಣಕ್ಕೆ ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿ ಅಮೆಜಾನ್  ಭಾರತದಲ್ಲಿ ಒಂದು ಲಕ್ಷ ಜನರನ್ನು ನೇಮಕ ಮಾಡಿಕೊಳ್ಳಲಿದೆಯಂತೆ.

ಪ್ಯಾಕಿಂಗ್ ಮಾಡಲು, ಸಾಗಿಸಲು ಅಥವಾ ವಿಂಗಡಿಸಲು ಹೊಸ ಉದ್ಯೋಗಿಗಳು ಸಹಾಯ ಮಾಡುತ್ತಾರೆ. ಈ ನೇಮಕಾತಿಗಳನ್ನು ಅರೆಕಾಲಿಕ ಮತ್ತು ಪೂರ್ಣ ಸಮಯದ ಆಧಾರದ ಮೇಲೆ ಮಾಡಲಾಗುತ್ತದೆ. ಅಂದಾಜು 3 ಲಕ್ಷ ಉದ್ಯೋಗಗಳಲ್ಲಿ ಶೇಕಡಾ 70 ರಷ್ಟು ಜನರಿಗೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕೆಲಸ ನೀಡುವ ನಿರೀಕ್ಷೆಯಿದೆ. ಉಳಿದ ಉದ್ಯೋಗಗಳನ್ನು ಇಕಾಮ್ ಎಕ್ಸ್‌ಪ್ರೆಸ್ ಮುಂತಾದ ಲಾಜಿಸ್ಟಿಕ್ಸ್ ಕಂಪನಿಗಳು ನೀಡಲಿವೆ. ಈ ಹಬ್ಬದ ಸಂದರ್ಭದಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ 70,000 ಜನರಿಗೆ ಕೆಲಸ ನೀಡುವುದಾಗಿ ಫ್ಲಿಪ್ಕಾರ್ಟ್ ಹೇಳಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...