HomeLifestyleಮನೆಯಲ್ಲೇ ತಯಾರಿಸಿ ಪನ್ನೀರ್ ಖೀರ್

ಮನೆಯಲ್ಲೇ ತಯಾರಿಸಿ ಪನ್ನೀರ್ ಖೀರ್

ಬಗೆ ಬಗೆಯ ಸಿಹಿ ತಿಂಡಿಗಳನ್ನು ನೀವು ಮಾಡಿರ್ತಿರಾ. ಈ ಬಾರಿ ಮನೆಯಲ್ಲಿಯೇ ಪನ್ನೀರ್ ಖೀರ್ ತಯಾರಿಸಿ.

ಪನ್ನೀರ್ ಖೀರ್ ಮಾಡಲು ಬೇಕಾಗುವ ವಸ್ತು :

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪನ್ನೀರ್ : ½ ಕಪ್

ಹಾಲು : 2 ಕಪ್

ಕಾರ್ನ್ ಫ್ಲೋರ್ : 2 ಚಮಚ

ಸಕ್ಕರೆ : 2-3 ಚಮಚ

ಏಲಕ್ಕಿ ಪುಡಿ : ಸ್ವಲ್ಪ

ಪಿಸ್ತಾ: 2 ಚಮಚ

ಕೇಸರಿ : ಸ್ವಲ್ಪ

ಬಾದಾಮಿ : 2 ಚಮಚ

ಪನ್ನೀರ್ ಖೀರ್ ಮಾಡುವ ವಿಧಾನ :

ಒಂದು ಪಾತ್ರೆಗೆ ಒಂದು ಕಪ್ ಹಾಲನ್ನು ಹಾಕಿ ಅದಕ್ಕೆ ಕೇಸರಿಯನ್ನು ಹಾಕಿ ನೆನೆಸಿಡಿ. ಸ್ವಲ್ಪ ತಣ್ಣನೆ ಹಾಲಿಗೆ ಕಾರ್ನ್ ಫ್ಲೋರ್ ಹಾಕಿ ಮಿಕ್ಸ್ ಮಾಡಿ.

ಇನ್ನೊಂದು ಪಾತ್ರೆಗೆ ಉಳಿದ ಹಾಲನ್ನು ಹಾಕಿ ಕುದಿಸಿ. ಹಾಲು ಕುದಿಯುತ್ತಿರುವಾಗ ಕಾರ್ನ್ಫೋರ್ ಮಿಶ್ರಿತ ಹಾಲನ್ನು ಹಾಕಿ 10 ನಿಮಿಷ ಕೈ ಆಡಿಸಿ. ಹಾಲು ಸ್ವಲ್ಪ ದಪ್ಪಗಾಗುತ್ತದೆ. ಇದಕ್ಕೆ ಕೇಸರಿಯುಕ್ತ ಹಾಲನ್ನು ಹಾಕಿ. ನಂತ್ರ ಅದಕ್ಕೆ ಪನ್ನೀರ್ ಹಾಗೂ ಸಕ್ಕರೆ ಹಾಕಿ ಮಿಕ್ಸ್ ಮಾಡಿ. 10 ನಿಮಿಷ ಕುದಿಸಿದ ನಂತ್ರ ಏಲಕ್ಕಿ ಪುಡಿ, ಪಿಸ್ತಾ ಪುಡಿ, ಬಾದಾಮಿ ಪುಡಿಯನ್ನು ಹಾಕಿ ಕುದಿಸಿ. ಬಿಸಿ ಬಿಸಿ ಪನ್ನೀರ್ ಖೀರ್ ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular