HomeBeautyಇಲ್ಲಿದೆ ಸದಾ ಯಂಗ್ ಆಗಿ ಕಾಣಿಸುವ ಒಳಗುಟ್ಟು

ಇಲ್ಲಿದೆ ಸದಾ ಯಂಗ್ ಆಗಿ ಕಾಣಿಸುವ ಒಳಗುಟ್ಟು

ವಯಸ್ಸಾದ ಗುರುತುಗಳು ಮುಖದ ಮೇಲೆ ಕಾಣಿಸಿಕೊಂಡಿವೆಯೇ. ಇಷ್ಟು ಬೇಗ ನಿಮ್ಮ ಮುಖದ ಮೇಲೆ ಸುಕ್ಕುಗಳು ಮೂಡುವುದು ನಿಮಗಿಷ್ಟವಿಲ್ಲವೇ? ಕೆಮಿಕಲ್ ಗಳ ಬಳಕೆಯಿಲ್ಲದೆ ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸುವ ಮೂಲಕ ನಿಮ್ಮ ತ್ವಚೆಯನ್ನು ಯಂಗ್ ಆಗಿ ಕಾಣುವಂತೆ ಮಾಡಬಹುದು.

ಮೊಟ್ಟೆಯ ಒಳಭಾಗವನ್ನು ತೆಗೆದುಕೊಂಡು ಅದಕ್ಕೆ 1 ಚಮಚ ನಿಂಬೆರಸ ಸೇರಿಸಿ ಹ್ಯಾಂಡ್ ವಿಸ್ಕ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ತಣ್ಣಗಿನ ನೀರಿನಲ್ಲಿ ಮುಖ ತೊಳೆಯಿರಿ. ಮೊಟ್ಟೆಯಲ್ಲಿರುವ ಪ್ರೊಟೀನ್ ತ್ವಚೆಯನ್ನು ಬಿಗಿಗೊಳಿಸುತ್ತದೆ. ನಿಂಬೆರಸ ಕಲೆಗಳನ್ನು ದೂರ ಮಾಡುತ್ತದೆ.

ಸಕ್ಕರೆ ಮತ್ತು ಜೇನುತುಪ್ಪದ ಮಿಶ್ರಣವೂ ಡೆಡ್ ಸೆಲ್ ಗಳನ್ನು ಹೋಗಲಾಡಿಸುತ್ತದೆ. ಈ ಮಿಶ್ರಣವನ್ನು ಮುಖದ ಮೇಲೆ ಸ್ಕ್ರಬ್ ಮಾಡಿ 5 ನಿಮಿಷ ಬಿಟ್ಟು ಬಳಿಕ ಮುಖ ತೊಳೆಯಿರಿ. ಜೇನುತುಪ್ಪ ತ್ವಚೆಯ ರಂಧ್ರಗಳಲ್ಲಿ ಕೂತಿರುವ ಕೊಳೆಯನ್ನೂ ದೂರಮಾಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಹಾದ ಎಲೆಗಳನ್ನು ಕುದಿಸಿ, ಈ ನೀರಿಗೆ ಶುಂಠಿ ರಸ ಸೇರಿಸಿ, ಚೆನ್ನಾಗಿ ಕುದಿದ ಬಳಿಕ ತಣ್ಣಗಾಗಲು ಬಿಡಿ. ಬಳಿಕ ತಣ್ಣನೆಯ ನೀರಿನಲ್ಲಿ ಮುಖ ತೊಳೆಯಿರಿ. ಇದರಿಂದ ಮುಖದ ಸುಕ್ಕುಗಳು ಕಡಿಮೆಯಾಗುತ್ತವೆ.

For Latest News Updates, Join Our Whatsapp Community🚩
RELATED ARTICLES

Most Popular