alex Certify ‘ಬಾಹುಬಲಿ’ಯಲ್ಲಿ ಬಲ್ಲಾಳ ದೇವನಾಗಿ ಅಬ್ಬರಿಸಿದ ರಾಣಾ ದಗ್ಗುಬಾಟಿ ಮನಗೆದ್ದ ಚೆಲುವೆ ಯಾರು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಾಹುಬಲಿ’ಯಲ್ಲಿ ಬಲ್ಲಾಳ ದೇವನಾಗಿ ಅಬ್ಬರಿಸಿದ ರಾಣಾ ದಗ್ಗುಬಾಟಿ ಮನಗೆದ್ದ ಚೆಲುವೆ ಯಾರು ಗೊತ್ತಾ…?

ದೇಶದ ಗಮನ ಸೆಳೆದಿದ್ದ ‘ಬಾಹುಬಲಿ’ ಚಿತ್ರದಲ್ಲಿ ಬಲ್ಲಾಳದೇವನಾಗಿ ಅಬ್ಬರಿಸಿದ್ದ ರಾಣಾ ದಗ್ಗುಬಾಟಿ ಅಭಿಮಾನಿಗಳಿಗೆ ಸಿಹಿಸುದ್ದಿ ಇಲ್ಲಿದೆ.

ರಾಣಾ ದಗ್ಗುಬಾಟಿ ಮನಗೆದ್ದ ಚೆಲುವೆ ಒಪ್ಪಿಗೆ ಸೂಚಿಸಿದ್ದಾರೆ. ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ನಡೆಸುತ್ತಿರುವ ಮಿಹೇಕಾ ಬಜಾಜ್ ರಾಣಾ ದಗ್ಗುಬಾಟಿಯನ್ನು ವರಿಸಲು ಒಪ್ಪಿಕೊಂಡಿದ್ದಾರೆ.

ಇದನ್ನು ಸ್ವತಃ ರಾಣಾ ದಗ್ಗುಬಾಟಿ ಅವರೇ ಖಚಿತಪಡಿಸಿದ್ದಾರೆ. ಟ್ವಿಟರ್ ನಲ್ಲಿ ತಮ್ಮ ಗೆಳತಿ ಒಪ್ಪಿಕೊಂಡ ಬಗ್ಗೆ ಹೇಳಿ ಫೋಟೋ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಮಿಹೇಕಾ ಬಜಾಜ್ ಜನಪ್ರಿಯ ಫ್ಯಾಷನ್ ಡಿಸೈನರ್ ಆಗಿದ್ದು, ಹೈದರಾಬಾದ್ ನಲ್ಲಿ ಜನಪ್ರಿಯ ಸ್ಟುಡಿಯೋ ಹೊಂದಿದ್ದಾರೆ. ಈ ಮೊದಲು ನಟಿ ತ್ರಿಶಾ ಕೃಷ್ಣನ್ ಜೊತೆಗೆ ಗೆಳೆತನ ಹೊಂದಿದ್ದ ರಾಣಾ ದಗ್ಗುಬಾಟಿ ದೂರವಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...