alex Certify ಆ ವೃದ್ದನ ಮಾತು ಕೇಳಿ ಕಣ್ಣೀರಿಟ್ಟಿದ್ದಳು ʼಟೈಟಾನಿಕ್‌ʼ ಸುಂದರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆ ವೃದ್ದನ ಮಾತು ಕೇಳಿ ಕಣ್ಣೀರಿಟ್ಟಿದ್ದಳು ʼಟೈಟಾನಿಕ್‌ʼ ಸುಂದರಿ

“ಟೈಟಾನಿಕ್ ” ಈ ಚಿತ್ರವನ್ನು ನೋಡಿ , ರೋಮಾಂಚನ ಗೊಳ್ಳದವರು ಯಾರು ಇಲ್ಲ. ಆ ಚಿತ್ರ ಸೃಷ್ಟಿಸಿದ್ದ ಹವಾ ಹೇಗಿತ್ತೆಂದರೆ, ಇಂಗ್ಲಿಷ್ ಭಾಷೆ ಬಾರದವರು ಸಹ ಟೈಟಾನಿಕ್ ನೋಡಿ ಖುಷಿ ಪಟ್ಟಿದ್ದರು. ಟೈಟಾನಿಕ್ ಚಿತ್ರದ ನಾಯಕಿ ಕೆಟ್ ವಿನ್ಸ್ಲೆಟ್ ಅತ್ಯಂತ ಖ್ಯಾತಿಯನ್ನು ಪಡೆದಿದ್ದರು. ಅವರ ಪ್ರಸಿದ್ಧಿ ಎಷ್ಟಿತ್ತೆಂಬ ಒಂದು ಸನ್ನಿವೇಶವನ್ನು ಅವರು ಪ್ರಸಿದ್ಧ ನಿಯತಕಾಲಿಕೆಯ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಟೈಟಾನಿಕ್ ಬಿಡುಗಡೆಗೊಂಡು 2 ವರ್ಷದ ನಂತರ, ಕೇಟ್ ಭಾರತಕ್ಕೆ ಪ್ರವಾಸ ಬಂದಿದ್ದರು. ಹಿಮಾಲಯದ ಬೆಟ್ಟಗಳ ಮೇಲೆ ಹೋಗುತ್ತಿದ್ದಾಗ, ಒಬ್ಬ ವಯಸ್ಸಾದ ವ್ಯಕ್ತಿ ಅವರ ಬಳಿ ಬಂದು “ಟೈಟಾನಿಕ್” ?? ಎಂದು ಕೇಳುತ್ತಾರೆ. ಕೇಟ್ ಹೌದು ಎಂದಾಗ, ಆ ವ್ಯಕ್ತಿ ತಮ್ಮ ಎದೆಯ ಮೇಲೆ ಕೈಯನ್ನು ಇಟ್ಟುಕೊಂಡು “ಧನ್ಯವಾದ” ಎಂದು ಹೇಳುತ್ತಾರೆ. ಕೇಟ್ ವೃದ್ದನ ಮಾತು ಕೇಳಿ ಅಳಲು ಪ್ರಾರಂಭಿಸಿದ್ದರು. ತಮಗೆ ಒಂದು ಚಿತ್ರದಿಂದ ಇಷ್ಟು ಖ್ಯಾತಿ ಸಿಕ್ಕಿದೆಯೇ ಎಂದು ಅಚ್ಚರಿಪಟ್ಟಿದ್ದರು.

ʼನನಗೆ ಆಗ 20 ವರ್ಷ. “ಟೈಟಾನಿಕ್” ನನಗೆ ಅದೆಷ್ಟು ಪ್ರಸಿದ್ಧಿ ನೀಡಿತೆಂದರೆ, ನನಗೆ ಅರಗಿಸಿಕೊಳ್ಳಲು ಕಷ್ಟವಾಗಿತ್ತು. ಆದರೆ, ಹಿಮಾಲಯದಲ್ಲಿ ನಡೆದ ಘಟನೆ “ಟೈಟಾನಿಕ್” ಜನರಿಗೆ ಏನನ್ನೋ ನೀಡಿದೆ ಎಂದು ಅರ್ಥವಾಯಿತುʼ ಎಂದು ಪ್ರಸಿದ್ದ ಮ್ಯಾಗಝೀನ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 1997 ರಲ್ಲಿ, ಜೇಮ್ಸ್ ಕೆಮರೂನ್ ಅವರ ನಿರ್ದೇಶನದಲ್ಲಿ ಬಿಡುಗಡೆಗೊಂಡಿದ್ದ ಟೈಟಾನಿಕ್, ಲಿಯಾನಾರ್ಡ್ ಡೀ ಕ್ಯಾಪ್ರಿಯೋ ಮತ್ತು ಕೇಟ್ ವಿನ್ಸ್ಲೆಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...