alex Certify ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ…? ವರ್ಷಾಂತ್ಯಕ್ಕೆ ಮದುವೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ…? ವರ್ಷಾಂತ್ಯಕ್ಕೆ ಮದುವೆ…?

ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರು ತೆರೆಯ ಮೇಲೆ ಮತ್ತು ಆಫ್ ಸ್ಕ್ರೀನ್‌ ನಲ್ಲಿಯೂ ಸಹ ಕ್ರ್ಯಾಕ್ಲಿಂಗ್ ಕೆಮಿಸ್ಟ್ರಿ ಹಂಚಿಕೊಳ್ಳುತ್ತಾರೆ. ಇಬ್ಬರೂ ಮುಂಬೈನಲ್ಲಿ ಡೇಟಿಂಗ್‌ ಗೆ ಹೋಗುತ್ತಿರುವುದು ಕಂಡುಬಂದಿದೆ. ಇದು ಅವರ ಸಂಬಂಧ ಮತ್ತು ಅವರ ಮದುವೆಯ ಬಗ್ಗೆ ವದಂತಿಗಳಿಗೆ ಪುಷ್ಠಿ ನೀಡಿದೆ. ಈ ವರ್ಷದ ಕೊನೆಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬ ಊಹಾಪೋಹಗಳಿವೆ. ಆದರೆ, ರಶ್ಮಿಕಾ ಆಗಲಿ, ವಿಜಯ್ ಆಗಲಿ ತಮ್ಮ ಸಂಬಂಧದ ಬಗ್ಗೆ ಇನ್ನೂ ಬಾಯಿಬಿಟ್ಟಿಲ್ಲ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಎರಡು ಸೂಪರ್‌ಹಿಟ್ ಚಿತ್ರಗಳಾದ ‘ಗೀತಾ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್‌’ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅಂದಿನಿಂದ ಅವರ ಅಭಿಮಾನಿಗಳು ಅವರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಹೇಳುತ್ತಿದ್ದಾರೆ. ಈಗ, ರಶ್ಮಿಕಾ ಮತ್ತು ವಿಜಯ್ ಸಂಬಂಧದಲ್ಲಿದ್ದಾರೆ. ಮತ್ತು ಈ ವರ್ಷದ ಕೊನೆಯಲ್ಲಿ ಮದುವೆಯಾಗಬಹುದು ಎಂದು ಹೇಳಲಾಗಿದೆ.

ಪ್ರಸ್ತುತ, ವಿಜಯ್ ದೇವರಕೊಂಡ ಪುರಿ ಜಗನ್ನಾಥ್ ಅವರ ‘ಲಿಗರ್’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ, ಮುಂಬೈನಲ್ಲಿ ಚಿತ್ರ ಶೂಟಿಂಗ್ ಪ್ರಗತಿಯಲ್ಲಿದೆ. ಮತ್ತೊಂದೆಡೆ, ರಶ್ಮಿಕಾ ಇತ್ತೀಚೆಗೆ ಮುಂಬೈನಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿ ತನ್ನ ನಾಯಿಮರಿ ಔರಾ ಜೊತೆ ತೆರಳಿದ್ದಾರೆ. ಇಬ್ಬರು ಮುಂಬೈನಲ್ಲಿ ಡೇಟ್‌ ಗೆ ಹೋಗುತ್ತಿರುವುದು ಹೆಚ್ಚಾಗಿ ಕಂಡುಬಂದಿದೆ.

ವಾಸ್ತವವಾಗಿ, ರಶ್ಮಿಕಾ ಹೊಸ ವರ್ಷವನ್ನು ಗೋವಾದಲ್ಲಿ ದೇವರಕೊಂಡ ಸಹೋದರರೊಂದಿಗೆ(ವಿಜಯ್ ಮತ್ತು ಆನಂದ್) ಕಳೆದರು. ತಿಳಿಯದವರಿಗೆ, ಪುಷ್ಪಾ ನಟಿ ವಿಜಯ್ ಅವರ ತಾಯಿ ಮಾಧವಿಯೊಂದಿಗೆ ಉತ್ತಮ ಸಂಬಂಧ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮತ್ತು ವಿಜಯ್ ಈ ವರ್ಷ ಮದುವೆಯಾಗುತ್ತಾರಾ?

ರಶ್ಮಿಕಾ ಮಂದಣ್ಣ ಅವರು ಅಲ್ಲು ಅರ್ಜುನ್ ಎದುರು ಜೋಡಿಯಾಗಿದ್ದ ‘ಪುಷ್ಪ: ದಿ ರೈಸ್‌’ನ ಬೃಹತ್ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಇಂಡಿಯಾ ಟುಡೇ.ಇನ್‌ ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಅವರು ಪ್ರೀತಿ ಮತ್ತು ಮದುವೆಯ ಬಗ್ಗೆ ಮಾತನಾಡಿದ್ದಾರೆ.

23 ವರ್ಷದ ನಟಿ ತಾನು ಮದುವೆಗೆ ತುಂಬಾ ಚಿಕ್ಕವಳು ಎಂದು ಹೇಳಿದ್ದಾರೆ. ಮದುವೆಯ ವಿಚಾರದ ಬಗ್ಗೆ ಕೆರಳಿಸಿದಾಗ, ನನಗೆ ಅದರ ಬಗ್ಗೆ ಏನು ಯೋಚಿಸಬೇಕೆಂದು ತಿಳಿದಿಲ್ಲ, ಏಕೆಂದರೆ ನಾನು ಈಗ ಅದಕ್ಕೆ ತುಂಬಾ ಚಿಕ್ಕವಳಾಗಿದ್ದೇನೆ, ನಾನು ಅದರ ಬಗ್ಗೆ ಯೋಚಿಸಲಿಲ್ಲ ಎಂದಿದ್ದಾರೆ.

ರಶ್ಮಿಕಾ ಅವರ ಪ್ರೀತಿಯ ವ್ಯಾಖ್ಯಾನವು ತಾನು ಪ್ರೀತಿಸುವ ಪುರುಷನೊಂದಿಗೆ ಸುರಕ್ಷಿತ ಭಾವನೆಯನ್ನು ಹೊಂದಿರುವುದಾಗಿದೆ. ‘ಪ್ರೀತಿ ಎಂದರೆ ಒಬ್ಬರಿಗೊಬ್ಬರು ಗೌರವ, ಸಮಯ ಕೊಡುವುದು ಮತ್ತು ಸುರಕ್ಷಿತವಾಗಿರಿಸುವುದು. ಪ್ರೀತಿಯನ್ನು ವಿವರಿಸುವುದು ಕಷ್ಟ. ಏಕೆಂದರೆ ಅದು ಭಾವನೆಗಳಿಗೆ ಸಂಬಂಧಿಸಿದೆ. ಪ್ರೀತಿಯು ಕೇವಲ ಎರಡೂ ರೀತಿಯಲ್ಲಿದ್ದಾಗ ಮಾತ್ರ ಕೆಲಸ ಮಾಡುತ್ತದೆ, ಕೇವಲ ಒಂದಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.

ಅಂದಹಾಗೆ, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮದುವೆಯ ವದಂತಿಗಳು ನಿಜವೇ? ಎಂಬುದರ ಬಗ್ಗೆ ಕಾಲವೇ ಉತ್ತರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...