alex Certify ಪತ್ನಿ ಗರ್ಭಿಣಿ ಎಂಬ ಕಾರಣಕ್ಕೆ ಶೋ ನಿಲ್ಲಿಸಿದ ಖ್ಯಾತ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಗರ್ಭಿಣಿ ಎಂಬ ಕಾರಣಕ್ಕೆ ಶೋ ನಿಲ್ಲಿಸಿದ ಖ್ಯಾತ ನಟ

ಹಾಸ್ಯನಟ ಕಪಿಲ್ ಶರ್ಮಾ ಶೀಘ್ರದಲ್ಲೇ  ದಿ ಕಪಿಲ್ ಶರ್ಮಾ ಶೋ ಬಂದ್ ಮಾಡಲಿದ್ದಾರೆ. ಶೋ ಬಂದ್ ಆಗಲು ಕಾರಣವೇನು ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿತ್ತು. ಟಿ ಆರ್ ಪಿ ಇಲ್ಲದ ಕಾರಣಕ್ಕೆ ಕಪಿಲ್ ಶರ್ಮಾ ಶೋ ಬಂದ್ ಮಾಡ್ತಿದ್ದಾರೆಂಬ ಸುದ್ದಿಯೂ ಇತ್ತು. ಆದ್ರೆ ಇದೆಲ್ಲ ಪ್ರಶ್ನೆಗೆ ಕಪಿಲ್ ಶರ್ಮಾ ಉತ್ತರ ನೀಡಿದ್ದಾರೆ.

ಗುರುವಾರ ಟ್ವೀಟರ್ ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಕಪಿಲ್ ಉತ್ತರ ನೀಡಿದ್ದಾರೆ. ಪತ್ನಿ ಗಿನ್ನಿ ಎರಡನೇ ಬಾರಿ ಗರ್ಭಿಣಿ. ಅವ್ರ ಜೊತೆ ಸಮಯ ಕಳೆಯಬೇಕು. ಈ ಕಾರಣಕ್ಕೆ ಸದ್ಯ ಶೋ ಬಂದ್ ಮಾಡ್ತಿದ್ದೇನೆಂದು ಕಪಿಲ್ ಶರ್ಮಾ ಹೇಳಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಕಪಿಲ್ ಶರ್ಮಾಗೆ ಅಭಿನಂದನೆ ಸಲ್ಲಿಸಲು ಶುರು ಮಾಡಿದ್ದಾರೆ.

ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ಪಾರುಲ್ ಯಾದವ್

ಇದೇ ವೇಳೆ ಅಭಿಮಾನಿಯೊಬ್ಬ ಮಗಳಿಗೆ ತಮ್ಮ ಬೇಕಾ? ತಂಗಿ ಬೇಕಾ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಉತ್ತರ ನೀಡಿದ ಶರ್ಮಾ, ಹೆಣ್ಣು, ಗಂಡು ಯಾರೆ ಆಗಿರಲಿ, ಆರೋಗ್ಯವಾಗಿರಲಿ ಎಂದಿದ್ದಾರೆ. 2018ರಲ್ಲಿ ಕಪಿಲ್ ಶರ್ಮಾ ಗೆಳತಿ ಗಿನ್ನಿ ಜೊತೆ ಮದುವೆಯಾಗಿದ್ದರು. ಮದುವೆಯಾಗಿ ವರ್ಷದೊಳಗೆ ಕಪಿಲ್ ತಂದೆಯಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...