alex Certify ಜನರ ಮೊಗದಲ್ಲಿ ನಗು ಅರಳಿಸಲು ಹಿಮದಲ್ಲೂ ಹೆಜ್ಜೆ ಹಾಕಿದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನರ ಮೊಗದಲ್ಲಿ ನಗು ಅರಳಿಸಲು ಹಿಮದಲ್ಲೂ ಹೆಜ್ಜೆ ಹಾಕಿದ ಪೊಲೀಸರು

ಸ್ವಿಜರ್​​ಲ್ಯಾಂಡ್​ನ ಪೊಲೀಸ್​ ಅಧಿಕಾರಿಗಳು ಪ್ರಸಿದ್ಧ ಹಾಡಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.

ಹಿಮದ ನಡುವೆ ಪೊಲೀಸ್​ ಅಧಿಕಾರಿಗಳು ಮಾಡುತ್ತಿರುವ ನೃತ್ಯದ ವಿಡಿಯೋ ಫೇಸ್​​ಬುಕ್​​ನಲ್ಲಿ ಬರೋಬ್ಬರಿ 8 ಮಿಲಿಯನ್​ ವೀವ್ಸ್ ಸಂಪಾದಿಸಿದೆ. ಪೊಲೀಸರ ಈ ನೃತ್ಯ ಕೇವಲ ಸ್ವಿಜರ್​ಲೆಂಡ್​ ಜನತೆಯನ್ನ ಮಾತ್ರವಲ್ಲದೇ ವಿಶ್ವದ ಮೂಲೆ ಮೂಲೆಯ ಜನರಿಂದ ಮೆಚ್ಚುಗೆ ಸಂಪಾದಿಸಿದೆ.

ಫೀಲ್ಡಿನಲ್ಲಿರುವ ಪೊಲೀಸರಿಂದ ಹಿಡಿದು ಕಂಟ್ರೋಲ್​ ರೂಂವರೆಗೆ ಎಲ್ಲಾ ಸಿಬ್ಬಂದಿ ಆಫ್ರಿಕನ್​​ ಹಿಟ್​ ಗೀತೇ ಜೆರುಸಲೆಮಾಗೆ ಕುಣಿದು ಕುಪ್ಪಳಿಸಿದ್ದಾರೆ. ಈ ಜೆರುಸಲೆಮಾ ಹಾಡನ್ನ ಸಂಗೀತ ನಿರ್ದೇಶಕ ಮಾಸ್ಟರ್​ ಕೆಜಿ ಕಂಪೋಸ್​ ಮಾಡಿದ್ದರೆ ನೊಮ್​ಕೆಬೊ ಜಿಕೊಡೆ ಹಾಡಿದ್ದಾರೆ. ಒಮ್ಮೊಮ್ಮೆ ಜೀವನದಲ್ಲಿ ನಗುವನ್ನ ಭೇಟಿ ಮಾಡೋಕೆ ಬಹಳ ಕಷ್ಟ ಪಡಬೇಕಿಲ್ಲ. ಅದರಲ್ಲೂ ನಗಲು ಬಹಳ ಕಷ್ಟ ಎನಿಸುವ ಈ ಸಂದರ್ಭದಲ್ಲೂ ಹಾಗೂ ನಮ್ಮ ಮುಖದಲ್ಲಿ ನಗು ತರಿಸಲು ಕಷ್ಟವಾಗ್ತಿರುವ ಈ ಸಂದರ್ಭದಲ್ಲಿ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

— Frankie Beats – KISSFM (@itsbeats) January 16, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...