alex Certify ಸುಶಾಂತ್ ಸಿಂಗ್ ಈ ಡೈಲಾಗ್ ಗೆ ‘ತಲೈವಾ’ ಅಭಿಮಾನಿಗಳು ಫಿದಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ಸಿಂಗ್ ಈ ಡೈಲಾಗ್ ಗೆ ‘ತಲೈವಾ’ ಅಭಿಮಾನಿಗಳು ಫಿದಾ…!

ತಮ್ಮ ಕೊನೆಯ ಚಿತ್ರ ‘ದಿಲ್ ಬೇಚಾರಾ’ ಮೂಲಕ ಅಭಿಮಾನಿಗಳ ಮನದಲ್ಲಿ ತಮ್ಮ ನೆನಪನ್ನು ಇನ್ನಷ್ಟು ಹಸಿಯಾಗಿಸಿರುವ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್‌, ತಲೈವಾ ರಜನೀಕಾಂತ್ ಅಭಿಮಾನಿಗಳಿಗೂ ಇಷ್ಟವಾಗಿದ್ದಾರೆ.

’ದಿಲ್ ಬೇಚಾರಾ’ ಕೇವಲ ಮತ್ತೊಂದು ಚಿತ್ರವಾಗಿರದೇ, ಅಭಿಮಾನಿಗಳಿಗೆ ಒಂದು ವಿಶೇಷ ಎಮೋಷನ್ ಆಗಿಬಿಟ್ಟಿದೆ. ಚಿತ್ರದಲ್ಲಿ ಸುಶಾಂತ್‌ ನಟಿಸಿರುವ ಮನ್ನಿ ಪಾತ್ರಧಾರಿ ತಾನು ರಜನಿಕಾಂತ್‌ ಥರ ಆಗಬೇಕು ಎಂದು ಹೇಳಿರುವುದು ತಲೈವಾ ಫ್ಯಾನ್ಸ್‌ಗೆ ಬಹಳ ಖುಷಿ ಕೊಟ್ಟಿದೆ.

ಇದೀಗ ರಜನಿ ಅಭಿಮಾನಿಗಳು ಸುಶಾಂತ್‌‌ ನೆನಪಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಮೆಮೆಗಳು ಹಾಗೂ ಸಂದೇಶಗಳನ್ನು ಹರಿಯಬಿಟ್ಟಿದ್ದಾರೆ.

— SathuSK (@Rajini_Sathu) July 24, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...