ವಿಶ್ವದಾದ್ಯಂತ ಅಗಾಧ ಸಂಖ್ಯೆಯಲ್ಲಿ ಫಾಲೋಯರ್ ಹೊಂದಿರುವ ಖ್ಯಾತ ನಟಿ ಸನ್ನಿ ಲಿಯೋನ್ ಹೊಸ ಕಾರು ಖರೀದಿಸಿ ಸುದ್ದಿಯಲ್ಲಿದ್ದಾರೆ.
ಪ್ರಸ್ತುತ ಲಾಸ್ ಏಂಜಲೀಸ್ ನಲ್ಲಿ ಪತಿ ಡೇನಿಯಲ್ ವೆಬರ್ ಮತ್ತು ಮಕ್ಕಳೊಂದಿಗೆ ವಾಸವಾಗಿರುವ ಸನ್ನಿ, ಇತ್ತೀಚೆಗಷ್ಟೇ ಹೊಸ ಐಶಾರಾಮಿ ಕಾರು ಖರೀದಿಸಿದ್ದರು.
ಇಟಲಿಯ ವಾಹನ ತಯಾರಿಕಾ ಕಂಪನಿಯ ಮಾಸೆರಾಟಿ ಕಾರನ್ನು ಅವರು ಬುಧವಾರ ಖರೀದಿಸಿದ್ದಾರೆ. ಹೊಸ ಕಾರಿನಲ್ಲಿ ತನ್ನ ಪತಿಯೊಂದಿಗೆ ಕುಳಿತ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಖುಷಿಯಿಂದ ಹಂಚಿಕೊಂಡಿದ್ದಾರೆ. ಏಳು ಲಕ್ಷಕ್ಕೂ ಅಧಿಕ ಮಂದಿ ಫೋಟೋವನ್ನು ಲೈಕ್ ಮಾಡಿದ್ದರೆ ಸಾವಿರಾರು ಅಭಿಮಾನಿಗಳು ಕಾಮೆಂಟ್ ಮಾಡಿ ಹಾರೈಸಿದ್ದಾರೆ.